ಯಲ್ಲಾಪುರ : ಪಟ್ಟಣದ ಸರ್ಕಾರಿ ಪ್ರಥಮದರ್ಜೆಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದ ಸುಬ್ರಮಣ್ಯಜಿ.ಆರ್. (೪೭) ಸೋಮವಾರ ಅನಾರೋಗ್ಯದಿಂದ ಮಂಗಳೂರಿನ ಎ.ಜೆ. ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಅವರು ಮೂಲತಃ ಶಿವಮೊಗ್ಗದವರಾಗಿದ್ದು ಪಟ್ಟಣದ ಕಾಲೆೆÃಜಿನಲ್ಲಿ ಕಳೆದ ೧೦ ವರ್ಷಗಳಿಂದ ರಾಜ್ಯಶಾಸ್ತ್ರ ವಿಭಾಗದ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದರು ಇವರು ಪತ್ನಿ ಹಾಗೂ ೩ ವರ್ಷದ ಮಗು ಸೇರಿದಂತೆ ಅಪಾರಬಂಧು ಬಳಗವನ್ನು ಅಗಲಿದ್ದಾರೆ. ನಿಧನಕ್ಕೆ ಪ್ರಾಂಶುಪಾಲೆ ಡಾ.ದಾಕ್ಷಾಯಣಿ ಹೆಗಡೆ, ಉಪನ್ಯಾಸಕರಾದ ಸುರೇಖಾ ತಡುವಲ್, ನಿತೀಶ ಮೋರೆ, ವಿದ್ಯಾರ್ಥಿಗಳು, ಬೋಧಕ ಹಾಗೂ ಬೋಧಕೇತರ ವರ್ಗದವರು ಕಾಲೇಜಿನಲ್ಲಿ ಮೌನ ಆಚರಿಸಿ ಸಂತಾಪ ಸೂಚಿಸಿದರು.
Leave a Comment