ಹೊನ್ನಾವರ; ಪ್ರಧಾನ ಮಂತ್ರಿ ನರೇಂದ್ರ ಮೋದಿ ಜನ್ಮ ದಿನಾಚರಣೆ ಪ್ರಯುಕ್ತ ಹೊನ್ನಾವರ ಬಿಜೆಪಿ ಮಂಡಲದಿಂದ ರಾಷ್ಟೋತ್ತನ ಪರಿಷತ ಸಹಯೋಗದಲ್ಲಿ ಲಯನ್ಸ ಸಭಾಭವನದಲ್ಲಿ ರಕ್ತದಾನ ಶಿಬಿರ ನೆರವೇರಿತು.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಜನ್ಮ ದಿನಾಚರಣೆ ಪ್ರಯುಕ್ತ ಸೇವೆ ಮತ್ತು ಸಮರ್ಪಣೆ ಘೋಷ ವಾಕ್ಯಗಳೊಂದಿಗೆ 20 ದಿನಗಳ ಕಾಲ ಹಮ್ಮಿಕೊಳ್ಳಲಾಗಿರುವ ಕಾರ್ಯಕ್ರಮದಲ್ಲಿ ಸ್ವಚ್ಚತೆ ಸೇರಿದಂತೆ ವಿವಿಧ ಕಾರ್ಯಕ್ರಮ ನಡೆಯುತ್ತಿದೆ. ತಾಲೂಕ ಬಿಜೆಪಿ ಮಂಡಲದಿಂದ ರಕ್ತದಾನ ಶಿಬಿರ ನೆರವೇರಿತು.
ಮಂಡಲಧ್ಯಕ್ಷ ರಾಜೇಶ ಭಂಡಾರಿ ರಕ್ತದಾನ ಮಾಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಂತರ ಮಾಧ್ಯಮದವರೊಂದಿಗೆ ಮಾತನಾಡಿ ಪ್ರಧಾನ ಮಂತ್ರಿಗಳ ಜನ್ಮ ದಿನಾಚರಣೆಯನ್ನು ಕಳೆದ ಸೆ. 17ರಿಂದ ನರೇಂದ್ರ ಮೋದಿಯವರು ಸಕ್ರಿಯ ರಾಜಕಾರಣಕ್ಕೆ ಬಂದು 20 ವರ್ಷ ಕಳೆದ ಹಿನ್ನೆಲೆಯಲ್ಲಿ 20 ದಿನಗಳ ಕಾಲ ಆಚರಿಸಲಾಗುತ್ತಿದೆ. ರಾಷ್ಟೋತ್ತಾನ ಪರಿಷತ್ ಸಹಯೋಗದಲ್ಲಿ ಬಿಜೆಪಿಯ ವಿವಿಧ ಘಟಕಗಳು ಒಗ್ಗೂಡಿ ರಕ್ತದಾನ ಶಿಬಿರವನ್ನು ಆಯೋಜಿಸಿದ್ದೇವೆ.
ಪೋಲಿಸ್ ಇಲಾಖೆ, ಲಯನ್ಸ ಪದಾಧಿಕಾರಿಗಳು, ಕಾಲೇಜಿನ ವಿದ್ಯಾರ್ಥಿಗಳು ರಕ್ತದಾನ ಮಾಡುವ ಕಾರ್ಯಕ್ರಮ ಯಶ್ವಸಿಯಾಗಿಸಿದ್ದಾರೆ. ರಕ್ತದಾನ ಮಾಡಿದ ಪ್ರತಿಯೊರ್ವರಿಗೂ ಮಂಡಲದ ವತಿಯಿಂದ ಮತ್ತು ರಾಷ್ಟೊತ್ತಾನ ಪರಿಷತ್ ವತಿಯಿಂದ ಎರಡು ಪ್ರಮಾಣ ಪತ್ರ ನೀಡುತ್ತಿದ್ದೇವೆ ಎಂದರು.

ಸಿ.ಪಿ.ಐ ಶ್ರೀಧರ ಎಸ್.ಆರ್, ಸಿಬ್ಬಂದಿಗಳು, ಬಿಜೆಪಿ ಮುಖಂಡರು ಕಾರ್ಯಕರ್ತರು ರಕ್ತದಾನ ಮಾಡಿದರು.ಈ ಸಂದರ್ಭದಲ್ಲಿ ಶಿವಾನಿ ಶಾಂತರಾಮ, ಪ.ಪಂ.ಸದಸ್ಯ ವಿಜಯ ಕಾಮತ್, ಉಮೇಶ ಮೇಸ್ತ, ಗುರುಪ್ರಸಾದ ಹೆಗಡೆ, ಸುರೇಶ ಹರಿಕಂತ್ರ, ಮಂಜುನಾಥ ನಾಯ್ಕ, ಎಂ.ಎಸ್.ಹೆಗಡೆ ಕಣ್ಣಿ, ಶ್ರೀಕಲಾ ಶಾಸ್ತ್ರಿ, ಆನಂದು ನಾಯ್ಕ, ಕಮಲಾಕರ ನಾಯ್ಕ, ಸುಬ್ರಹ್ಮಣ್ಯ ಶಾಸ್ತ್ರಿ, ಗಣೇಶ ಸಾರಂಗ ಮತ್ತಿತರರು ಉಪಸ್ಥಿತರಿದ್ದರು.
Leave a Comment