ಹೊನ್ನಾವರ: ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷದ ನವೋದಯ ಪರೀಕ್ಷೆಯಲ್ಲಿ ಚಿದಾನಂದ ಭುವನೇಶ್ವರ ನಾಯ್ಕ ಆಯ್ಕೆಯಾಗಿದ್ದಾನೆ.ತಾಲೂಕಿನ ಯಲಕೊಟ್ಟಿಗೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದನೇ ತರಗತಿಯಿಂದ ಐದನೇ ತರಗತಿಯವರೆಗೆ ಅಧ್ಯಯನ ಮಾಡಿ ಪ್ರಸ್ತುತ ಹಿರಿಯ ಪ್ರಾಥಮಿಕ ಶಾಲೆ ಬೈಲಗದ್ದೆಯಲ್ಲಿ ಆರನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ.

ಯಲಕೊಟ್ಟಿಗೆ ಇದು ಮಹಿಮೆ ಗ್ರಾಮದ ಒಂದು ಮಜರೆಯಾಗಿದ್ದು ತಾಲೂಕಾ ಕೇಂದ್ರದಿಂದ 30 ಕಿ.ಮೀ ದೂರದಲ್ಲಿರುವ ದಟ್ಟ ಅರಣ್ಯದಲ್ಲಿರುವ ಒಂದು ಹಳ್ಳಿಯಾಗಿದೆ. ಕೋವಿಡ್-19 ರ ಸಂದರ್ಭದಲ್ಲಿಯೂ ವಿದ್ಯಾರ್ಥಿ ತನ್ನ ಸ್ವಂತ ಪ್ರಯತ್ನ ಶಿಕ್ಷಕರ ಸಹಕಾರ ಹಾಗೂ ಪಾಲಕ ಪೋಷಕರ ಪ್ರೋತ್ಸಾಹದೊಂದಿಗೆ ಈ ಸಾಧನೆಯನ್ನು ಮಾಡಿದ್ದಾನೆ. ಈತನ ಸಾಧನೆಗೆ ಸಿ.ಆರ್.ಪಿಗಳು, ಶಾಲೆಯ ಶಿಕ್ಷಕರು, ಎಸ್.ಡಿ.ಎಮ್.ಸಿಯವರು, ಪಾಲಕ ಪೋಷಕರು, ಪೂರ್ವ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಪ್ರಶಂಶೆ ವ್ಯಕ್ತಪಡಿಸಿದರು.
Leave a Comment