ಬೆಂಗಳೂರು : ವಾಲ್ಡೀವ್ಸ್ನಲ್ಲಿ ಕಡಿಮೆ ಬೆಲೆಗೆ ಹೋಟೆಲ್ ಕೋಣೆ ಲಭ್ಯವಿರುವುದಾಗಿ ಪೇಸ್ ಬುಕ್ ನಲ್ಲಿ ಹಾಕಿದ್ದ ಜಾಹೀರಾತಿಗೆ ಮರುಳಾದ ವಕೀಲೆಯೊಬ್ಬರು 1.5 ಲಕ್ಷ ರೂ. ಕಳೆದುಕೊಂಡಿದ್ದಾರೆ.
ಕಾಕ್ಸ್ ಟೌನ್ ನಿವಾಸಿ ಹರಿಪ್ರಿಯಾ (48) ಹಣ ಕಳೆದುಕೊಂಡರು. ಹರಿಪ್ರಿಯಾ ಫೇಸ್ ಬುಕ್ ನಲ್ಲಿ ಟೂರಿಂಗ್ ಟ್ರಾವಲ್ ಏಜೆನ್ಸಿ ಬಗ್ಗೆ ಜಾಹೀರಾತು ನೋಡಿ ವಾಲ್ಡೀವ್ಸ್ನಲ್ಲಿ ಕಡಿಮೆ ಬೆಲೆಗೆ ಹೋಟೆಲ್ ಕೋಣೆ ಲಭ್ಯವಿರುವುದನ್ನು ಗಮನಿಸಿದ್ದರು. ಜಾಹೀರಾತಿನಲ್ಲಿದ್ದ ನಂಬರ್ಗೆ ವಾಟ್ಸ್ ಆ್ಯಪ್ ಮೂಲಕ ಸಂದೇಶ ಕಳುಹಿಸಿ ಕೋಣೆ ಬುಕ್ ಮಾಡಲು ಸೂಚಿಸಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ಆರೋಪಿ ಮುಂಗಡವಾಗಿ 1.30 ಲಕ್ಷ ರೂ. ತನ್ನ ಬ್ಯಾಂಕ್ ಖಾತೆಗೆ ಜಮೆ ಮಾಡಬೇಕು ಎಂದಿದ್ದ. ಜು. 31 ರಿಂದ ಆ.18 ರವರೆಗೆ ಆರೋಪಿ ಕಳುಹಿಸಿದ ಬ್ಯಾಂಕ್ ಖಾತೆಗೆ ಹರಿಪ್ರಿಯಾ ಹಂತಹAತವಾಗಿ 1.5 ಲಕ್ಷ ರೂ. ಗೂಗಲ್ ಪೇ ಮೂಲಕ ಜಮೆ ಮಾಡಿದ್ದರು. ಆದಾಗಿ ತಿಂಗಳು ಕಳೆದರೂ ಆತ ಸಂಪರ್ಕಕ್ಕೆ ಸಿಗಲಿಲ್ಲ. ಆಗ ತಾವು ಮೋಸ ಹೋಗಿರುವುದನ್ನು ಅರಿತ ಹರಿಪ್ರಿಯಾ ಪೂರ್ವ ವಿಭಾಗದ ಸಿಇಎನ್ ಕ್ರೆöÊಂ ಠಾಣೆಗೆ ದೂರು ನೀಡಿದ್ದಾರೆ.
Leave a Comment