ಹೊನ್ನಾವರ: ತಾಲೂಕಿನ ಕೆಳಗಿನೂರಿನ ವ್ಯವಸಾಯ ಸೇವಾ ಸಹಕಾರಿ ಸಂಘ ಕೊರೋನಾ ಸಂಕಷ್ಟದ ಸಮಯದಲ್ಲಿಯೂ 2.09 ಕೋಟಿರೂ. ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷ ಗಣಪಯ್ಯ ಕನ್ಯಾ ಗೌಡ ತಿಳಿಸಿದರು.
ಪಟ್ಟಣದ ಖಾಸಗಿ ಹೋಟೇಲನಲ್ಲಿ ನಡೆದ ಪತ್ರಿಕಾಗೊಷ್ಟಿಯಲ್ಲಿ ಮಾತನಾಡಿದ ಕೆಳಗಿನೂರು ವ್ಯವಸಾಯ ಸಂಘವು 6867 ಶೇರುಸದಸ್ಯರು, 2.79 ಕೋಟಿ ರೂ. ಶೇರು ಬಂಡವಾಳ, 7.83 ಕೋಟಿ ರೂ. ನಿಧಿಗಳು, 38.86 ಕೋಟಿ ರೂ. ಠೇವುಗಳು, 2.96 ಕೋಟಿ ರೂ. ಬೆಳೆಸಾಲ, 44.61 ಕೋಟಿ ರೂ. ಮೆಂಬರರ ಸಾಲ, ದುಡಿಯುವ ಭಂಡವಾಳ 52.47 ಕೋಟಿ ರೂ., ಹೊಂದಿದ್ದು ಸಾಲ ವಸೂಲಾತಿ ಪ್ರಮಾಣ ಶೇ. 94 ಆಗಿದೆ. ಸತತ 12 ವರ್ಷಗಳಿಂದ ಆಡಿಟ್ ಕ್ಲಾಸ್ ಎ ವರ್ಗದಲ್ಲಿದೆ ಎಂದು ತಿಳಿಸಿದರು.

ಶಿಕ್ಷಣ ಪ್ರೋತ್ಸಾಹನಿಧಿ ಸ್ಥಾಪಿಸಿ ಶಾಲಾಮಕ್ಕಳಿಗೆ ಸ್ಕೂಲ್ಬ್ಯಾಗ್ ವಿತರಣೆ ಮಾಡಲಾಗಿದೆ. ಸಂಘದ ನಿರ್ದೇಶಕರು ಮತ್ತು ನೌಕರರು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾದರೆ 1ಲಕ್ಷ ರೂ.ವರೆಗಿನ ಆಸ್ಪತ್ರೆ ಬಿಲ್ ಭರಿಸಲಾಗುತ್ತದೆ. ಮರಣೋತ್ತರ ನಿಧಿ ಸ್ಥಾಪಿಸಲಾಗಿದ್ದು ಸಂಘದ ಸದಸ್ಯರು ಮರಣ ಹೊಂದಿದರೆ ಅಂತ್ಯ ಸಂಸ್ಕಾರಕ್ಕೆ 5ಸಾವಿರ ರೂ. ನೀಡಲಾಗುತ್ತದೆ. ಸದಸ್ಯರ ಕಲ್ಯಾಣ ನಿಧಿ ಸ್ಥಾಪಿಸಿ ಸಂಘದ ವಾರ್ಷಿಕ ಮಹಾಸಭೆಗೆ ಸದಸ್ಯರು ಹಾಜರಾಗುವುದನ್ನು ಪ್ರೋತ್ಸಾಹಿಸಲು ಹಾಜರಾಗುವ ಸದಸ್ಯರಿಗೆ ಗಿಫ್ಟ್ ನೀಡಲಾಗುತ್ತದೆ. ಕೊರೋನಾ ಸಂದರ್ಭದಲ್ಲಿ 6ಸಾವಿರ ಪಡಿತರ ಕಾರ್ಡ್ದಾರರಿಗೆ ಮಾಸ್ಕ್ ವಿತರಣೆ ಮಾಡಲಾಗಿದೆ.
ಎಲ್ಲ ಗೊಬ್ಬರ ಕಂಪನಿಗಳಲ್ಲಿ ಸದಸ್ಯತ್ವ ಹೊಂದಿ ನೇರವಾಗಿ ಗೊಬ್ಬರ ಖರೀದಿಸಿ ರೈತರಿಗೆ ಅನುಕೂಲ ಕಲ್ಪಿಸಲಾಗಿದೆ. ಸಂಘದ ಏರಿಳಿತನಿಧಿ ಸ್ಥಾಪಿಸಿ ಸರ್ಕಾರದಿಂದ ಬರುವ ತೆರಿಗೆ ಮತ್ತು ಇನ್ನಿತರ ಆಕಸ್ಮಿಕ ಹಣಭರಣ ಸಂದರ್ಭ ಬಂದಲ್ಲಿ ಈ ನಿಧಿಯಿಂದ ಪಾವತಿಸಲಾಗುತ್ತದೆ. ಸ್ವಂತಕಟ್ಟಡ ನಿಧಿಯಿಂದ ಕೆಳಗಿನೂರು ಮತ್ತು ಗುಣವಂತೆಯಲ್ಲಿ ಸುಸಜ್ಜಿತವಾದ ಕಟ್ಟಡ ನಿರ್ಮಾಣ ಮಾಡಲಾಗಿದೆ. ಸಂಘದ ವ್ಯವಹಾರಕ್ಕೆ ಬೇರೆಯಾವುದೇ ಬ್ಯಾಂಕಿನಿಂದ ಸಾಲ ಪಡೆಯದೇ ಸ್ವಂತ ಬಂಡವಾಳದಿಂದ ವ್ಯವಹರಿಲಾಗುತ್ತಿದ್ದು 8.30 ಕೋಟಿ ರೂ.ಗಳನ್ನು ಉಳಿದ ಬ್ಯಾಂಕಿನಲ್ಲಿ ಠೇವಣಿ ಇಡಲಾಗಿದೆ ಎಂದು ತಿಳಿಸಿದರು.



shri devaki krishna wash point, karki naka, honavar, contact; sachin mesta 9538529046,8310014860
2003-04ರಲ್ಲಿ ಸುಭಾಷಯಾದವ ರಾಷ್ಟ್ರ ಪ್ರಶಸ್ತಿ, 2010ರಿಂದ ಸತತ ಮೂರುಸಲ ರಾಜ್ಯ ಪ್ರಶಸ್ತಿ, 1997-98ರಿಂದ ಏಳುಸಲ ಪಿಎಸಿಎಸ್ ಮಟ್ಟದಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ಬಗ್ಗೆ ಅಪೆಕ್ಷ ಬ್ಯಾಂಕಿನಿಂದ ಪ್ರಶಸ್ತಿ, 1995-96ರಿಂದ ತಾಲೂಕಿನಲ್ಲಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿದ ಬಗ್ಗೆ ಕೆಡಿಸಿಸಿ ಬ್ಯಾಂಕಿನಿಂದ ಪ್ರಶಸ್ತಿ, 2010-11ರಿಂದ ಐದುಸಲ ರಾಜ್ಯಮಟ್ಟದಲ್ಲಿ ಅತ್ಯುನ್ನತ ಸಾಧನಾ ಪ್ರಶಸ್ತಿ, 2017-19ನೇ ಸಾಲಿನಲ್ಲಿ ಜಿಲ್ಲಾ ಮಟ್ಟದಲ್ಲಿ ಮಾಡಿದ ಸಾಧನೆ ಬಗ್ಗೆ ಅಪೆಕ್ಷ್ ಬ್ಯಾಂಕಿನಿಖದ ಪ್ರಶಸ್ತಿಗಳಿಗೆ ಸಂಘ ಭಾಜನವಾಗಿದೆ ಎಂದರು.
ಗುಣವಂತೆ ಹಿರೇಮಠ, ಚಿತ್ತಾರ, ಅನಂತವಾಡಿಯಲ್ಲಿ ಶಾಖೆಗಳನನು ತೆರಯಲಾಗಿದ್ದು ಇನ್ನೂ ಎರಡು-ಮೂರು ಕಡೆ ಶಾಖೆಗಳನ್ನು ತೆರೆಯಲು ಯೋಜಿಸಲಾಗಿದೆ ಎಂದು ತಿಳಿಸಿದರು.
ಪ್ರಧಾನ ಮುಖ್ಯಕಾರ್ಯ ನಿರ್ವಾಹಕ ಮಹೇಶ ಹೆಗಡೆ, ಸಂಘದ ಉಪಾಧ್ಯಕ್ಷ ರಾಮಚಂದ್ರ ಮೇಸ್ತ, ನಿರ್ದೇಶಕರಾದ ದೇವ ಗೌಡ,ಅಣ್ಣಪ್ಪ ನರಸ ಗೌಡ, ಅಣ್ಣಪ್ಪ ಗಣಪಯ್ಯ ಗೌಡ, ವಿಷ್ಣು ಗೌಡ, ವೆಂಕಟೇಶ ನಾಯ್ಕ, ರಾಮ ಗೌಡ, ಗಣಪಿ ಶಂಭು ಗೌಡ, ದೇವಿ ಹಸ್ಲರ, ತ್ರಿವೇಣಿ ಗೌಡ, ಬುಡ್ಡಿ ಗೊಂಡ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
Leave a Comment