ಕೇಂದ್ರ ಸರ್ಕಾರದ ಮಿನಿರತ್ನ ಕಂಪನಿಗಳಲ್ಲಿ ಒಂದಾಗಿರುವ ಕೊಚ್ಚಿನ್ ಶಿಪ್ ಯಾರ್ಡ್ ಲಿಮಿಟೆಡ್ (ಸಿಎಸ್ಎಲ್) ನಲ್ಲಿ ಎಕ್ಸಿಕ್ಯೊಟಿವ್ ಟ್ರೇನಿಗಳನ್ನು ನೇಮಿಸಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಅರ್ಜಿ ಆಹ್ವಾನಿಸಿ ಅಧಿಸೂಚನೆ ಹೊರಡಿಸಲಾಗಿದೆ.
ಒಟ್ಟು ಹುದ್ದೆಗಳು : 70
70 ಹುದ್ದೆಗಳಲ್ಲಿ 31 ಸ್ಥಾನ ಸಾಮಾನ್ಯ ವರ್ಗದ ಅಭ್ಯರ್ಥಿಗೆ 10 ಸ್ಥಾನ ಆರ್ಥಿಕವಾಗಿ ದುರ್ಬಲವಾಗಿರುವ ಅಭ್ಯರ್ಥಿಗೆ, ಎಸ್ಸಿಗೆ 9, ಎಸ್ಟಿಗೆ 3, ಇತರೆ ಹಿಂದುಳಿದ ವರ್ಗಕ್ಕೆ 17 ಸ್ಥಾನ ಮೀರಸಲಾಗಿದ್ದು, 5ಸ್ಥಾನ ಅಂಗವಿಕಲ ಅಭ್ಯರ್ಥಿಗಳಿಗೆ ಕಾಯ್ದಿರಿಸಲಾಗಿದೆ. ಆಯ್ಕೆಯಾಗುವ ಅಭ್ಯರ್ಥಿಗಳನ್ನು ಕೊಚ್ಚಿಯಲ್ಲಿರುವ ಸಿಎಲ್ಎಲ್ ಘಟಕ ಅಥವಾ ಮುಂಬೈ, ಕೋಲ್ಕತ್ತ, ಅಂಡಮಾನ್ ನಿಕೋಬಾರ್ ದ್ವೀಪಗಳಿಗೂ ನೇಮಕ ಮಾಡಬಹುದಾಗಿದೆ.
ವಿದ್ಯಾರ್ಹತೆ : ಸಿವಿಲ್, ಎಲೆಕ್ಟಿçಕಲ್, ಎಲೆಕ್ಟಾçನಿಕ್ಸ್, ಮೆಕಾನಿಕಲ್, ನವಲ್ ಆರ್ಕಿಟೆಕ್ಚರ್, ಕಂಪ್ಯೂಟರ್ ಸೈನ್ಸ್/ ಕಂಪ್ಯೂಟರ್ ಅಪ್ಲಿಕೇಷನ್ /ಇನ್ ಫರ್ಮೇಷನ್ ಟೆಕ್ನಾಲಜಿಯಲ್ಲಿ ಇಂಜಿನಿಯರಿAಗ್ ಪದವಿ, ಹ್ಯೂಮನ್ ರಿಸೋರ್ಸ್ ಹುದ್ದೆಗೆ ಯಾವುದೇ ಪದವಿ/ಬಿಜಿನೆಸ್ ಅಡ್ಮಿನಿಸ್ಟೆçÃಷನ್/ ಸೋಷಿಯಲ್ ವರ್ಕ್/ ಪರ್ಸೋನಲ್ ಮ್ಯಾನೇಜ್ಮೆಂಟ್ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಎಲ್ಲ ಹುದ್ದೆಗೂ ಕನಿಷ್ಠ ಶೇ.65 ಅಂಕ ಪಡೆದಿರಬೇಕು.
ಹುದ್ದೆ ವಿವರ
ಸಿವಿಲ್ – 2
ಎಲೆಕ್ಟಿçಕಲ್ – 19
ಎಲೆಕ್ಟಾçನಿಕ್ಸ್ – 2
ಮೆಕಾನಿಕಲ್ – 37
ನವಲ್ ಆರ್ಕಿಟೆಕ್ಚರ್ – 6
ಇನ್ ಫರ್ಮೇಷನ್ ಟೆಕ್ನಾಲಜಿ – 2
ಹ್ಯೂಮನ್ ರಿಸೋರ್ಸ್ – 2
ವೇತನ : ಆಯ್ಕೆಯಾಗುವ ಅಭ್ಯರ್ಥಿಗಳು ಒಂದು ವರ್ಷ ತರಬೇತಿ ಪೂರೈಸಬೇಕಿದ್ದು, ಈ ಅವಧಿಯಲ್ಲಿ 50,000 ರೂ. ಸ್ಟೆöÊಪೆಂಡ್ ನೀಡಲಾಗುವುದು. ಈ ಅವಧಿಯಲ್ಲಿ ಹೆಚ್ಚುವರಿ ಅವಧಿ ಕೆಲಸ ಮತ್ತು ರಜಾ ದಿನಗಳಲ್ಲಿ ಕೆಲಸ ಮಾಡಿದರೆ ಹೆಚ್ಚುವರಿಯಾಗಿ 3,000 ರೂ. ನೀಡಲಾಗುವುದು. ಅಭ್ಯರ್ಥಿಗಳು ಒ0ದು ವರ್ಷದ ತರಬೇತಿಯನ್ನು ಯಶಸ್ವಿಯಾಗಿ ಪೂರೈಸಿದ ನಂತರ ಅಸಿಸ್ಟೆಂಟ್ ಮ್ಯಾನೇಜರ್ ಹುದ್ದಗೆ ಬಡ್ತಿ ನೀಡಲಾಗುವುದು. ಈ ವೇಳೆಯಲ್ಲಿ ಮಾಸಿಕ 40,000-1,40,000 ರೂ ವರೆಗೆ ವೇತನ ನೀಡಲಾಗುವುದು.
ವಯೋಮಿತಿ : 27/10/2021ಕ್ಕೆ ಅನ್ವಯವಾಗುವಂತೆ ಗರಿಷ್ಠ 27 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. 28/10/1994 ರ ನಂತರ ಜನಿಸಿರಬೇಕು. ಮೀಸಲಾತಿ ಅಭ್ಯರ್ಥಿಗಳಿಗೆ ವಯೋಸಡಿಲಿಕೆ ಇದೆ.
ಸೇವಾ ಒಪ್ಪಂದ : ಸಂಸ್ಥೆಯಲ್ಲಿ ಕನಿಷ್ಠ 5 ವರ್ಷ ಸೇವೆ ಸಲ್ಲಿಸುವುದಾಗಿ 5 ಲಕ್ಷ ರೂ.ನ ಸೇವಾ ಒಪ್ಪಂದ ಬಾಂಡ್ ನೀಡಬೇಕು.
ಆಯ್ಕೆ ಪ್ರಕ್ರಿಯೆ : ಮೊದಲ ಹಂತದಲ್ಲಿ ಬಹು ಆಯ್ಕೆ ಮಾದರಿಯ ಆನ್ ಲೈನ್ ಪರೀಕ್ಷೆ ನಡೆಸಲಾಗುವುದು.
2ನೇ ಹಂತದಲ್ಲಿ ಗುಂಪು ಚೆರ್ಚೆ, ಬರವಣಿಗೆ ಕೌಶಲ ಮತ್ತು ಸಂದರ್ಶನ ನಡೆಸಿ ಆಯ್ಕೆ ಮಾಡಲಾಗುವುದು.
ಅರ್ಜಿ ಶುಲ್ಕ : ಎಸ್ಸಿ, ಎಸ್ಟಿ, ಅಂಗವಿಕಲ ಅಭ್ಯರ್ಥಿಗಳನ್ನು ಹೊರತುಪಡಿಸಿ ಉಳಿದ ಅಭ್ಯಥಿಗಳು 750 ರೂ. ಅರ್ಜಿಶುಲ್ಕವನ್ನು ಆನ್ಲೈನ್ ಮೂಲಕ ಪಾವತಿಸಬೇಕು.
ಅರ್ಜಿ ಸಲ್ಲಿಸುವ ಕೊನೇ ದಿನಾಂಕ : 27/10/2021
job info; Join our whatsapp group
ಅರ್ಜಿ ಸಲ್ಲಿಸಲು / apply link ; https://cochinshipyard.azurewebsites.net/index_controller_CSL/register#no-back-button
https://cochinshipyard.in/career/career_locations/1
interested candidates can read the full notification before apply online
ಅಧಿಸೂಚನೆ /notification ;
Leave a Comment