

ಯಲ್ಲಾಪುರ :ತಾಲೂಕಿನ ಆರತಿಬೈಲ ಘಟ್ಟದಲ್ಲಿ ಮಂಗಳೂರಿನಿಂದ ಹುಬ್ಬಳ್ಳಿ ಕಡೆ ಹೊರಟ ಕೆಮಿಕೆಲ್ಸ್ ತುಂಬಿದ ಟ್ಯಾಂಕರ್ ಪಲ್ಟಿ ಯಾಗಿ ಸ್ಫೋಟ ಗೊಂಡು ಬೆಂಕಿ ಹೊತ್ತಿಕೊಂಡಿರುವ ಘಟನೆ ಇಂದು ನಸುಕಿನ ಜಾವ ಸಂಭವಿಸಿದೆ.ಮಂಗಳೂರಿನಿಂದ ಹುಬ್ಬಳ್ಳಿ ಕಡೆ ಹೊರಟ ಪೇಂಟ್ ತಯಾರಿಕೆಯಲ್ಲಿ ಬಳಸುವ ಕೆಮಿಕಲ್ ಟ್ಯಾಂಕರ್ ಅಪಘಾತ ವಾಗಿದ್ದರಿಂದ ಬಳಗಾರ ರಸ್ತೆಯ ಹಳ್ಳಕ್ಕೆ ಹರಿದ ಕೆಮಿಕಲ್. ಹಳ್ಳದ ನೀರಿನೊಂದಿಗೆ ಕೆಮಿಕಲ್ ದ್ರಾವಣ ಹರಿದಿದೆ, ಹಳ್ಳದ ನೀರಿನ ಮೇಲೆ ತೆಲುವ ಕೆಮಿಕಲ್ವ ಹಾಗೂ ಗದ್ದೆಗೆ ಬೆಂಕಿ ತಗಲಿದೆ .ಪೊಲೀಸರು,ಅಗ್ನಿಶಾಮಕ ದಳದ ನಾಲ್ಕೂ ವಾಹವ ಹಾಗೂ ಸಿಬ್ಬಂದಿ ಅಗ್ನಿ ನಂದಿಸುವಲ್ಲಿ ಶ್ರಮಿಸುತ್ತಿದ್ದಾರೆ.

.ತಕ್ಷಣ,ಅಗ್ನಿ ಶಾಮಕ್ ದಳದವರು ಸ್ಥಳಕ್ಕೆ ಬಂದು ಬೆಂಕಿಯ ಕೆನ್ನಾಲಳಗೆ ಚಾಚದಂತೆ ನಿಯಂತ್ರಕ್ಕೆ ತರುತ್ತಿದ್ದಾರೆ.ಅಪಘಾತ ಸ್ಥಳದಿಂದ ಸೂಮಾರು ಅರ್ಧ ಕಿಲೋಮೀಟರ್ ಬೆಂಕಿ ಹರಡಿದಿದ್ದರೂ ಅದೃಷ್ಟವಶಾತ್ ಯಾವದೇ ಜೀವ ಹಾನಿಯಾಗಿಲ್ಲ ಎಂದು ಪ್ರಾಥಮಿಕ ವಾಗಿ ತಿಳಿದುಬಂದಿದೆ
Leave a Comment