ಶಿರಸಿ: ಮೈಸೂರಿನ ಸೆಂಟರ್ ಫಾರ್ ಕಲ್ಚರ್ ಕಮ್ಯುನಿಕೇಶನ್ ಎಂಡ್ ಕ್ರಿಯೇಟಿವಿಟಿ ಫೋರ್ ಸಿ, ನಟನ ರಂಗ ಕೇಂದ್ರ ಜಂಟಿಯಾಗಿ ಹಮ್ಮಿಕೊಂಡ ಕಥಾ ಮೇನಿಯಾ ಸ್ಪರ್ಧೆಯಲ್ಲಿ ತಾಲೂಕಿನ ತಾರಗೋಡ ಬಳಿಯ ಕೂಗಲಕುಳಿಯ ಸಾನ್ವಿ ಜೋಶಿ ಕಥಾ ರತ್ನರಾಗಿ ಆಯ್ಕೆ ಆಗಿದ್ದಾರೆ.
ರಾಜ್ಯ, ಹೊರ ರಾಜ್ಯ, ಹೊರ ದೇಶಗಳಿಂದ ಆರನೂರಕ್ಕೂ ಅಧಿಕ ಕನ್ನಡದ ಮಕ್ಕಳೂ ಪಾಲ್ಗೊಂಡ ಈ ಸ್ಪರ್ಧೆಯ ಅಂತಿಮ ಸುತ್ತಿನಲ್ಲಿ ಕಥೆ ಹೇಳಿ ಒಟ್ಟೂ ಹನ್ನೊಂದು ಮಕ್ಕಳು ಕಥಾರತ್ನರಾಗಿ ಹೊರ ಹೊಮ್ಮಿದ್ದಾರೆ. ಲಾಕ್ ಡೌನ್ ಸಂದರ್ಭದಲ್ಲಿ ಮಕ್ಕಳಲ್ಲಿ ಕಥೆ ಹೇಳುವ ಪ್ರವೃತ್ತಿ ಉಳಿಸಬೇಕು ಎನ್ನುವ ನಿಟ್ಟಿನಲ್ಲಲಿ ಈ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು.

ಡಾ. ನಿರಂಜನ ವಾನಳ್ಳಿ ಮಂಡ್ಯ ರಮೇಶ ವೀಕ್ಷಿಸಿ ಅಂತಿಮ ಹಂತದ ಮೂವತ್ತು ಕಥೆಗಳನ್ನು ಪ್ರಸಿದ್ದ ಸಾಹಿತಿ ಜಯಂತ ಕಾಯ್ಕಿಣಿ ಅವರಿಗೆ ಕಳುಹಿಸಿ ಅಂತಿಮ ಆಯ್ಕೆ ಮಾಡಲಾಗಿತ್ತು. ಸಾನ್ವಿ ಜೋಶಿ ಹನ್ನೊಂದು ಮಕ್ಕಳಲ್ಲಿ ಸ್ಥಾನ ಪಡೆದಿದ್ದು. ಎಲ್ಲರೂ ಪ್ರಥಮ ಸ್ಥಾನ ಪಡೆದಂತೇ ಆಗಿದೆ ಎಂದು ಸಂಘಟಕರು ತಿಳಿಸಿದ್ದಾರೆ. ಸ್ವಾನಿ ಜೋಶಿ ಪ್ರಬಾತ ಜೋಶಿ ಹಾಗೂ ನಂದನಾ ಜೋಶಿಯ ಮಗಳಾಗಿದ್ದು. ಟಿ ಡಸ್. ಎಸ್. ನಡೆಸಿದ ಕಿಶೋರ ಕನ್ನಡತಿಯಲ್ಲೂ ಪಾಲ್ಗೊಂಡು ಗೆದ್ದಿದ್ದಳು.
Leave a Comment