ಶಿಕ್ಷಕರ ಪ್ರಮುಖ ಬೇಡಿಕೆಗಳ ಈಡೇರಿಕೆಗಾಗಿ ಮಕ್ಕಳ ಪಾಠ ಬೋಧನೆಗೆ ತೊಂದರೆಯಾಗದಂತೆ ದಿನಾಂಕ 21-10-2021 ರಂದು ಕಪ್ಪು ಪಟ್ಟಿ ಧರಿಸಿ ಶಿಕ್ಷಕರು ಹೊನ್ನಾವರ ತಾಲೂಕಿನಾದ್ಯಂತ ಎಲ್ಲಾ ಶಾಲೆಗಳಲ್ಲಿ ಪ್ರತಿಭಟನೆ ನಡೆಸಿದರು. ಈ ಪ್ರತಿಭಟನೆ ದಿನಾಂಕ 29-10-2021 ರವರೆಗೆ ನಡೆಯಲಿದೆ ಎಂದು ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಅಧ್ಯಕ್ಷರಾದ ಎಂ.ಜಿ.ನಾಯ್ಕರವರು ತಿಳಿಸಿದರು.
ಶಿಕ್ಷಕರ ಪ್ರಮುಖ ಬೇಡಿಕೆಯಾದ ವರ್ಗಾವಣೆ 2 ವರ್ಷದಿಂದ ನಡೆದಿರುವುದಿಲ್ಲ. NPS ರದ್ದುಪಡಿಸಿ OPS ಜಾರಿಗೆ ತರಬೇಕು. ಪ್ರಾಥಮಿಕ ಶಾಲಾ ಶಿಕ್ಷಕ ಪದವೀಧರರಿಗೆ ಪದವೀಧರ ಶಿಕ್ಷಕರೆಂದು ಪರಿಗಣಿಸಿ 6-8 ನೇ ತರಗತಿಗಳಿಗೆ ಮಾನ್ಯ ಮಾಡಬೇಕು. ಬಡ್ತಿಯಲ್ಲಿ ಆಧ್ಯತೆ ನೀಡಬೇಕು.

2008 ಕ್ಕೆ ಪೂರ್ವದಲ್ಲಿ ನೇಮಕವಾದ ಎಲ್ಲಾ ಶಿಕ್ಷಕರಿಗೆ ವರ್ಗಾವಣಾ ಸಂದರ್ಭದಲ್ಲಿ ಖಾಲಿ ಇದ್ದ ಎಲ್ಲಾ ಹುದ್ದೆಗಳನ್ನೂ ನೀಡುವಂತಾಗಬೇಕು. ಗ್ರಾಮೀಣ ಕೃಪಾಂಕದಿಂದ ವಂಚಿತರಾದ ಶಿಕ್ಷಕ/ಶಿಕ್ಷಕಿಯರಿಗೆ ಹಿಂದಿನ ಸೇವೆಯನ್ನು ಪರಿಗಣಿಸಿ ಆರ್ಥಿಕ ಸೌಲಭ್ಯ ನೀಡಬೇಕು. ಹಿಂದಿ ಶಿಕ್ಷಕರಿಗೆ ಎಚ್.ಪಿ.ಎಸ್ ಗಳಲ್ಲಿ ಖಾಲಿ ಹುದ್ದೆ ತೋರಿಸುವಂತಾಗಬೇಕು.
ವೃಂದ ಮತ್ತು ನೇಮಕಾತಿ ನಿಗಮಗಳ ತಿದ್ದುಪಡಿ, ಮುಖ್ಯ ಶಿಕ್ಷಕರುಗಳಿಗೆ 15, 20, 25 ವರ್ಷದ ವೇತನ ಬಡ್ತಿ ದೈಹಿಕ ಶಿಕ್ಷಕರ ಸಮಸ್ಯೆ ಇತ್ಯಾದಿಗಳನ್ನು ಬಗೆಹರಿಸಬೇಕು. ಸಾಮಾನ್ಯವಾಗಿ 2008 ಕ್ಕಿಂತ ಹಿಂದೆ ನೇಮಕವಾದ ಪ್ರೌಢಶಾಲೆಗಳಲ್ಲಿ ಶಿಕ್ಷಕರಾಗಿ ನೇಮಕಗೊಂಡು ಬಾಹ್ಯವಾಗಿ ಎಮ್.ಎ, ಎಮ್.ಎಸ್.ಸಿ ಪದವಿ ಗಳಿಸಿದ ಶಿಕ್ಷಕ/ಶಿಕ್ಷಕಿಯರಿಗೆ ಕಾಲೇಜಿನ ಲೆಕ್ಚರ್ಗಳಾಗಿ ಬಡ್ತಿ ನೀಡಿರುತ್ತಾರೆ. ಅದೇ ರೀತಿ ಪ್ರಾಥಮಿಕ ಶಾಲಾ ಶಿಕ್ಷಕರಗಾಗಿ ನೇಮಕಗೊಂಡು ಬಾಹ್ಯವಾಗಿ ಬಿ.ಎ, ಬಿ.ಎಡ್, ಎಮ್.ಎ ಪದವಿಗಳಿಸಿದ ಶಿಕ್ಷಕರಿಗೆ ಯಾಕೆ ಪದವೀಧರ ಶಿಕ್ಷಕರೆಂದು ಪರಿಗಣಿಸಬಾರದು ಎಂಬುದು ಶಿಕ್ಷಕರ ಪ್ರಶ್ನೆಯಾಗಿದೆÉ.
ಬಡ್ತಿ ನೀಡುವಾಗ ವರ್ಗಾವಣೆ ಮಾಡುವಾಗ, ಶಾಲೆಗಳಲ್ಲಿ ಶಿಕ್ಷಕರ ಸಂಖ್ಯೆಯ ಮಾನದಂಡ ಪ್ರೌಢಶಾಲೆಗಳಿಗಿಂತ ಪ್ರಾಥಮಿಕ ಶಾಲೆಗಳಿಗೆ ಏಕೆ ತಾರತಮ್ಯ. ಇಂತಹ ನೀತಿ ಸರಿಯಾದುದೇ ಎಂಬುದು ಶಿಕ್ಷಕರ ಪ್ರಶ್ನೆಯಾಗಿದೆ.
ಶಿಕ್ಷಕರ ಸಮಸ್ಯೆ ಬಗೆಹರಿಯದೇ ಹೋದಲ್ಲಿ, ಸರಕಾರ ಅಥವಾ ಇಲಾಖೆ ಪ್ರಮುಖ ಬೇಡಿಕೆಗಳಿಗೆ ಸ್ಪಂದಿಸದೇ ಹೋದಲ್ಲಿ ಮುಂದಿನ ದಿನಗಳಲ್ಲಿ ದಿನಾಂಕ 30-10-2021 ರಿಂದ 10-11-2021 ರವರೆಗೆ ಮಧ್ಯಾಹ್ನದ ಬಿಸಿಯೂಟದ (ಎಮ್ಡಿಎಮ್) ಮಾಹಿತಿಯನ್ನು ಅಪ್ಡೇಟ್ ಮಾಡದೇ ಅಸಹಕಾರ ವ್ಯಕ್ತಪಡಿಸುವುದು . ದಿನಾಂಕ 11-11-2021 ರಿಂದ 18-11-2021 ರವರೆಗೆ ಎಸ್ಟಿಎಎಸ್ ಮಾಹಿತಿಯನ್ನು ಅಪ್ಲೋಡ್ ಮಾಡದೇ ಶಿಕ್ಷಕರ ಸಮಸ್ಯೆಗಳ ಕುರಿತು ಗಮನ ಸೆಳೆಯುವುದು. ಇದಾದ ನಂತರ ಶಿಕ್ಷಕರ ಸಂಘಕ್ಕೆ ಆಯ್ಕೆಯಾದ ಎಲ್ಲಾ ಸದಸ್ಯರು ರಾಜ್ಯಮಟ್ಟದಲ್ಲಿ ರ್ಯಾಲಿ ಹಾಗೂ ಧರಣಿ ಸತ್ಯಾಗ್ರಹ ಮಾಡಲಾಗುವುದು.
shri devaki krishna wash point karki naka honavar contact; sachin mesta 9538529046,8310014860
ಆದ್ದರಿಂದ ಸರ್ಕಾರದ ಎಲ್ಲಾ ಕಾರ್ಯಕ್ರಮಗಳಲ್ಲಿ ಇಲಾಖೆಯ ಎಲ್ಲಾ ಮಾಹಿತಿಗಳನ್ನು ನೀಡುವಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರು ಪ್ರಾಮಾಣಿಕವಾಗಿ ಕಾರ್ಯ ಮಾಡಿದರೂ ಶಿಕ್ಷಕರಿಗೆ ನ್ಯಾಯವಾಗಿ ಸಿಗಬೇಕಾದ ಸೌಲಭ್ಯಗಳನ್ನು ಒದಗಿಸುವಲ್ಲಿ ಸರ್ಕಾರ ಹಾಗೂ ಇಲಾಖೆ ಮೀನಮೇಷ ಮಾಡುತ್ತಿರುವುದು ತುಂಬಾ ನೋವಿನ ಸಂಗತಿಯಾಗಿದೆ ಎಂದು ಶಿಕ್ಷಕರ ಸಂಘದ ತಾಲೂಕಾಧ್ಯಕ್ಷರು ಬೇಸರ ವ್ಯಕ್ತಪಡಿಸಿದರು.
ಅದರಂತೆ ಹೊನ್ನಾವರ ತಾಲೂಕು ಕೇಂದ್ರಗಳಲ್ಲಿ ಮಾನ್ಯ ಶಿಕ್ಷಣ ಸಚಿವರಿಗೆ ಮಾನ್ಯ ಪ್ರಧಾನ ಕಾರ್ಯದರ್ಶಿಗಳು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಬೆಂಗಳೂರುರವರಿಗೆ ಹಾಗೂ ಮಾನ್ಯ ಆಯುಕ್ತರು ಸಾರ್ವಜನಿಕ ಶಿಕ್ಷಣ ಇಲಾಖೆ ಬೆಂಗಳೂರುರವರಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಮತಿ ಡಾ. ಸವಿತಾ ನಾಯ್ಕ ಇವರ ಮೂಲಕ ಬೇಡಿಕೆಗಳ ಈಡೇರಿಕೆಗಾಗಿ ಹಾಗೂ ಸಂಘದ ಮುಂದಿನ ನಡೆಯ ಬಗ್ಗೆ ಮನವಿ ಸಲ್ಲಿಸುವ ಕಾರ್ಯ ನಡೆಯಿತು. ಈ ಸಂದರ್ಭದಲ್ಲಿ ತಾಲೂಕಾ ಪ್ರಧಾನ ಕಾರ್ಯದರ್ಶಿ ಕೆ.ಎಮ್.ಹೆಗಡೆ, ಜಿಲ್ಲಾ ಗೌರವಾಧ್ಯಕ್ಷರಾದ ಸುಧೀಶ ನಾಯ್ಕ, ಜಿಲ್ಲಾ ಉಪಾಧ್ಯಕ್ಷೆ ಸಾಧನಾ ಬರ್ಗಿ, ಪದಾಧಿಕಾರಿಗಳಾದ ಸುರೇಶ ನಾಯ್ಕ, ಶ್ರೀಮತಿ ಲಕ್ಷ್ಮೀ ಎಚ್, ಶ್ರೀಮತಿ ಶಾರದಾ ಹೆಗಡೆ, ಶ್ರೀ ಅಣ್ಣಪ್ಪ ನಾಯ್ಕ, ಶ್ರೀ ಎಂ.ಡಿ.ನಾಯ್ಕ, ಪ್ರಶಾಂತ್ ಭಟ್ ಹಾಗೂ ಸದಸ್ಯರು ಮತ್ತು ಶಿಕ್ಷಕರು ಹಾಜರಿದ್ದರು.
Leave a Comment