
ಯಲ್ಲಾಪುರ; ಬಂಗಾರಪ್ಪ ನವರು ರಾಜ್ಯದ ರಾಜಕೀಯ ಮುತ್ಸದಿಯಾಗಿದ್ದರೂ ಅವರು ಜಾತಿ, ರಾಜಕೀಯಕ್ಕೆ ಮಾತ್ರ ಸೀಮಿತವಾಗಿರದೆ ದೀನ ದಲಿತರ ಬಡವರ ಪಾಲಿಗೆ ಆರಾದ್ಯ ದೈವ ವಾಗಿದ್ದರು ಎಂದು ನಾಮಧಾರಿ ಸಂಘದ ಪ್ರಮುಖ ಅಶೊಕ ನಾಯ್ಕ ಹೇಳಿದರು. ಅವರು ಮಂಗಳವಾರ ಮಾಜಿ ಮುಖ್ಯಮಂತ್ರಿ ಬಂಗಾರಪ್ಪಾ ಅವರ 89 ನೆ ಜನ್ಮದಿನದ ನಿಮಿತ್ತ ಸಮಗ್ರ ನಾಮಧಾರಿ ಅಭಿವೃದ್ಧಿ ಸಂಘ ಹಾಗು ಯುವನಾಮಧಾರಿ ಯಲ್ಲಾಪುರಹಾಗುಬಂಗಾರಪ್ಪಾಅಭಿಮಾನಿಬಳಗದವತಿಯಿಂದಮಲ್ಲಿಕಾರ್ಜುನ ಜನಸೇವಾ ಸೋಸೈಟಿ ಅವರ ರಾಘವೇಂದ್ರ ವೃದ್ದಾಶ್ರಮ ಹಾಗೂಬುದ್ಧಿಮಾಂದ್ಯ ವಸತಿಶಾಲೆ ಯ ಮಕ್ಕಳಿಗೆ ಬೆಡಶಿಟ್ ಹಾಗು ಹಣ್ಣು ಹಂಪಲು ವಿತರಣೆ ಮಾಡಿದ ನಂತರ ಮಾತನಾಡಿ ಅಶ್ರಯ, ಆರಾಧಾನಾ, ಬಗರ್ ಹುಕುಂ ಹೋರಾಟಗಾರ, ರೈತರ ಪಂಪ್ ಸೆಟ್ಗೆ ಉಚಿತ ವಿದ್ಯುತ್ , ಗ್ರಾಮೀಣ ಕೃಪಾಂಕ ಯೊಜನೆ ಜಾರಿಗೆ ತಂದು ಬಡವರ ಪಾಲಿಗೆ ಆಶಾಕಿರಣ ವಾಗಿದ್ದರು ಎಂದರು.

ಪಟ್ಟಣ ಪಂಚಾಯತ ಸದಸ್ಯರಾದ ಸೊಮು ನಾಯ್ಕ, ರಾಜು ನಾಯ್ಕ , ಸತೀಶ ನಾಯ್ಕ, ಮಾಜಿ ಸೈನಿಕ ತುಳಸಿದಾಸ್ ನಾಯ್ಕ, ನಾಗೇಶ ನಾಯ್ಕ,ನವೀನ ನಾಯ್ಕ , ಬಾಲಕೃಷ್ಣ ನಾಯ್ಕ, ಮೊಹನ್ ನಾಯ್ಕ ಶಿವಾನಂದ ನಾಯ್ಕ,ಮಂಜುನಾಥ ನಾಯ್ಕ,ರಾಜೇಶ ನಾಯ್ಕ,ಬುದ್ಧಿಮಾಂದ್ಯ ಶಾಲೆಯ ಶಿಕ್ಷಕ ಶ್ರೇಯಸ್ ಹಾಗು ಅಕ್ಷತಾ ಇದ್ದರು.
Leave a Comment