
ಯಲ್ಲಾಪುರ: ಪ್ರತಿ ಓಣಿಯಲ್ಲಿಯೂ ಒಬ್ಬ ಕ್ರೀಡಾಪಟು ಅಡಗಿರುತ್ತಾನೆ ಅಂತಹವರಿಗೆ ತಳಹಂತದಲ್ಲಿಯೇ ಗುರುತಿಸಿ ತರಭೇತಿ ನೀಡಿದರೆ ರಾಷ್ಟçಮಟ್ಟದ ಲ್ಲಿ ಮಿಂಚುವ ಕ್ರೀಡಾ ಪ್ರತಿಭೆಗಳು ನಮ್ಮೂರಿನವರು ಆಗಬೇಕು ಎಂಬ ಮಹತ್ವಾಂಕಾಕ್ಷೆ ನಿವೃತ್ತ ದೈಹಿಕ ಶಿಕ್ಷಕ ಜಿ .ಎಮ ತಾಂಡೂರಾಯನ ಅವರದ್ದಾಗಿದೆ.
ಆದರೆ ಇಂದು ತಾಲೂಕು ಹಾಗೂ ಗ್ರಾಮೀಣ ಮಟ್ಟದಲ್ಲಿ ತರಭೇತಿದಾರರ ಕೇವಲ ಮಹತ್ವಾಕಾಂಕ್ಷೆ ವ್ಯಕ್ತಪಡಿಸದೇ ಅದರತ್ತ ಹೆಚ್ಚಿನ ಆಸಕ್ತಿಯಿಂದ ಕಾಳಮ್ಮನಗರದ ತಾಲೂಕಾ ಕ್ರೀಡಾಂಗಣದಲ್ಲಿ ತಮ್ಮ ಸ್ವಂತ ವೆಚ್ಚದಲ್ಲಿ ಹಾಗೂ ದಾನಿಗಳ ಸಹಕಾರದಿಂದ ಕ್ರೀಡಾ ಉಪಕರಣ ಆಳವಡಿಸಿ ತಾಲೂಕಿನ ಸುತ್ತಮುತ್ತ ಇರುವ ಮಕ್ಕಳಿಗೆ ಉಚಿತ ತರಭೇತಿಯನ್ನು ನೀಡುವ ಮೂಲಕ ಸ್ಪೂರ್ತಿದಾಯಕ ಹೆಜ್ಜೆಯನ್ನು ಇಟ್ಟಿದ್ದಾರೆ.
ಜಿ.ಎಮ್ ತಾಂಡೂರಾಯನ್ ಅವರು ಉಳ್ಳವರೆನು ಅಲ್ಲ ಆದರೆ ಕ್ರೀಡೆಯ ಬಗ್ಗೆ ಅತೀವ ಆಸಕ್ತಿ ಹೊಂದಿರುವವರು.

ಮೂಲತಃ ತಮಿಳುನಾಡಿನವರಾದರೂ ಅಪ್ಪಟ ಕನ್ನಡಾಭಿಮಾನಿ ಹುಟ್ಟಿ ಬೆಳೆದದ್ದು ಯಲ್ಲಾಪೂರದಲ್ಲಿ . ಪಟ್ಟಣದ ಸಬಗೇರಿ ಸರಕಾರಿ ಶಾಲೆಯಲ್ಲಿಯೇ ಅಖಂಡ ೨೭ ವರ್ಷ ಸೇವೆ ಸಲ್ಲಿಸಿ ನಿವೃತ್ತ ರಾಗಿದ್ದಾರೆ. ವಿದ್ಯಾರ್ಥಿದೆಸೆಯಿಂದಲೆ ಅವರು ಯಾವದೇ ತರಭೇತಿಯಿಲ್ಲದೇ ಸ್ವತಃ ಅಂತರಾಷ್ಟಿçÃಯ ಕ್ರೀಡಾಪಟು ಆಗಿದ್ದಾರೆ. ತಮ್ಮ ವಿದ್ಯಾರ್ಥಿಗಳು ರಾಷ್ಟçಮಟ್ಟದಲ್ಲಿ ಮಿಂಚುವAತೆ ಮಾಡಿದ್ದಲ್ಲದೇ, ಜಿಲ್ಲೆಯೆ ಕ್ರೀಡಾಪಟುಗಳಿಗೆ ಬಿಲ್ವೀದ್ಯೆ ತರಭೇತಿ ನೀಡಿ ರಾಜ್ಯಮಟ್ಟದ ಸ್ಪರ್ಧೆಗೆ ಸಜ್ಜುಗೊಳಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.ಗುಡ್ಡ ಗಾಡು ಓಟ, ಹಾಕಿ, ಖೋ ಖೊ, ಬಿಲ್ವೀದ್ಯೆ ಯಲ್ಲಿ ಎತ್ತಿದ ಕೈ . ತಮ್ಮ ವಿದ್ಯೆಯನ್ನು ಯಾವದೇ ಫಲಾಪೇಕ್ಷೆಯಿಲ್ಲದೇ ಧಾರೆಯರೆಯು ವ ಮೂಲಕ ಸಧೃಡ ಸಮಾಜಕ್ಕೆ ಕೊಡುಗೆ ನೀಡುತ್ತಿದ್ದಾರೆ.
ನಿಗಳ ನೆರವಿನಿಂದ ಈಗಾಗಲೇ ತಾಲೂಕಾ ಕ್ರೀಡಾಂಗಣದಲ್ಲಿ ಹೈಡಲ್ಸ, ಜಿಗ್ ಜಾಗ ಓಟಕ್ಕೆ ಕೋನ್, ಜಂಪಿAಗ್ ಸ್ಟಂಟ್ , ಟ್ರಂಪೋಲಿಯನ್(ಹೈಜAಪ ಸಂಬAದ ಪಟ್ಟ ಪರಿಕರ) , ವಾಲ್ ಬಾರ, ಸಿಂಗಲ್ ಬಾರ್, ಸೇರಿದಂತೆ ಹೀಗೆ ಸುಮಾರು ೪೦ ಸಾವಿರ ರೂ ವೆಚ್ಚದಲ್ಲಿ ಕ್ರೀಡಾ ಉಪಕರಣಗಳನ್ನು ಆಳವಡಿಸಿ ದಿನನಿತ್ಯ ಪ್ರಾಥಮಿಕ, ಪ್ರೌಢಶಾಲೆಯ ೩೦, ೪೦ ಮಕ್ಕಳಿಗೆ ತರಭೇತಿ ನೀಡುತ್ತಿದ್ದಾರೆ.
ಸ್ಥಳಿಯವಾಗಿ ಇಂತಹ ಕ್ರೀಡಾ ಪರಿಕರಗಳು ಯಾವದೇ ಶಾಲಾ ಕಾಲೇಜು ಗಳಲ್ಲಿಯೂ ಕಂಡುಬರುವದಿಲ್ಲ.ಅಷ್ಟೋAದು ವ್ಯವಸ್ಥಿತವಾಗಿ ತರಭೇತಿಗೆ ಸಜ್ಜುಗೊಳಿಸಿದ್ದಾರೆ ಇವರ ಈ ಉತ್ತಮ ಕಾರ್ಯಕ್ಕೆ ಇರುವ ಇಚ್ಛಾಶಕ್ತಿಯನ್ನು ಕಂಡು ಹೆಸರು ಹೇಳಚ್ಛಿಸದ ದಾನಿಗಳು ಕೈಜೋಡಿಸಿದ್ದಾರೆ. ಕಳೆದೆರಡು ವರ್ಷದಿಂದ ಅಮೇಚೂರ ಅಥ್ಲೇಟಿಕ್ ಅಸೋಶಿಯೇಶನ್ ನೋಂದಣಿಗಾಗಿ ಪ್ರಯತ್ನ ಪಡುತ್ತಿದ್ದಾರೆ ಆದರೆ ಈವರೆಗೂ ಆಗಿಲ್ಲ .ನೊಂದಣಿಯಾದರೆ ಇಲ್ಲಿನ ಕ್ರೀಡಾ ಪ್ರತಿಭೆಗಳಿ ಗೆ ಹೆಚ್ಚಿನ ಸೌಲಭ್ಯ ಕಲ್ಪಿಸಲು ಸಾಧ್ಯವಗುತ್ತದೆಯಲ್ಲದೇ ನೇರವಾಗಿ ರಾಷ್ಟçಮಟ್ಟದ ಸ್ಫರ್ಧೆಗಳಿಗೆ ಭಾಗವಹಿಸಲು ಸಾಧ್ಯವಾಗುತ್ತದೆ. ವಿಧಾನ ಪರಿಷತ್ ಸಿದ್ದಿಯವರು ತಮ್ಮಿಂದಾದ ಸಹಾಯ ಸಹಕಾರ ನೀಡುತ್ತಾ ಬಂದಿದ್ದಾರೆ. ಅದೇ ರೀತಿ ಅವರ ಪರಿಶ್ರಮದಿಂದ ಅಮೆಚೂರ ಅಶೋಶಿಯೆಶನ್ ನೊಂದಣಿಯಾಗುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಪಾರಂಪರಿಕವಾಗಿ ಸಧೃಢವಾಗಿರುವ ಸಿದ್ದಿ ಮಕ್ಕಳನ್ನು ಕ್ರೀಢಾ ತರಭೇತಿಗೊಳಿಸುವಲ್ಲಿಯೂ, ಮಹತ್ವದ ಪಾತ್ರ ವಹಿಸಿದ್ದಾರೆ.

ಕ್ರೀಡಾಸಕ್ತಿಯುಳ್ಳ ಮಕ್ಕಳು ಸ್ಥಳಿಯವಾಗಿ ತರಭೇತಿ ಸಿಗದೇ ಅವಕಾಶವಂಚಿತರಾಗಬಾರದು. ಪಾಲಕರು ಪಠ್ಯಕ್ಕೆ ಮಹತ್ವ ನೀಡಿದ್ದಷ್ಟೇ ಮಕ್ಕಳ ಕ್ರೀಡಾ ಚಟುವಟಿಕೆಗಳಿಗೂ ಪ್ರೇರೆಪಿಸಬೆಕು. ಇದರಿಂದ ಸಧೃಡತೆ ,ಏಕಾಗ್ರತೆ ಹೆಚ್ಚಾಗಿ ಆರೋಗ್ಯಯುತ ಜೀವನ ಮಕ್ಕಳದ್ದಾಗುತ್ತದೆ .ಚಿಕ್ಕ ವಯಸ್ಸಿನಿಂದಲೆ ತರಭೇತಿ ನೀಡಿ ಅವರನ್ನು ಉತ್ತಮ ಕ್ರೀಡಾ ಸ್ಪರ್ಧಾಳುಗಳಾಗಿ ಹೊರಹೊಮ್ಮುವಂತೆ ಮಾಡುವದು ನನ್ನ ಉದ್ದೇಶವಾಗಿದೆ –ತರ ಭೇತು ದಾರ ಜಿ.ಎಮ್ ತಾಂಡೂರಾಯನ್ ನಿವೃತ್ತ ದೈಹಿಕ ಶಿಕ್ಷಕ
Leave a Comment