
ಯಲ್ಲಾಪುರ :
ಕತ್ತಲು ಕಳೆದು ಬಾಳಲ್ಲಿ ಬೆಳಕು ಮೂಡಿಸುವ ಹಬ್ಬ ದೀಪಾವಳಿ. ಯಾವುದೇ ಬೇಧವಿಲ್ಲದೆ, ಕಟ್ಟಳೆಯಿಲ್ಲದೆ ಹರಡುವುದು ಬೆಳಕು. ಬಣ್ಣ ಬಣ್ಣದ, ಸುಂದರ ಚಿತ್ತಾಕರ್ಷಕ ದೀಪಾವಳಿಯ ಆಕಾಶ ಬುಟ್ಟಿಗಳು ಮತ್ತದರ ಬೆಳಕು ನಮ್ಮ ಸಂಭ್ರವದ ಪ್ರತೀಕವಾಗಿದೆ. ಎಂದು ಬ್ರಹ್ಮ ಕುಮಾರಿ ಶಿವಲೀಲಾ ಹೇಳಿದರು .ಅವರು ಪಟ್ಟಣದ ಶಾರದಾಗಲ್ಲಿಯ ಬ್ರಹ್ಮ ಕುಮಾರಿ ಈಶ್ವರಿ ವಿದ್ಯಾಲಯದ ಶಾಖೆಯಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ಅಷ್ಟ ಲಕ್ಷ್ಮಿಯರ ಪ್ರದರ್ಶನ ಸಂದರ್ಭದಲ್ಲಿ .ದೀಪಾವಳಿ ಕುರಿತು ಸಂದೇಶ ನೀಡಿದರು ದೀಪಾವಳಿ ಎಂದರೆ ದೀಪಗಳ ಸಾಲು. ಅನೇಕ ಪುರಾಣ, ನಂಬಿಕೆ, ಸುಂದರ ಆಶಯಗಳು ಬೆರೆತಿರುವ ಹಬ್ಬಗಳ ಸರಪಳಿಯೇ ದೀಪಾವಳಿ. ಕಷ್ಟಗಳೆಂಬ ಕತ್ತಲೆಯನ್ನು ದೂರಮಾಡವಂತೆ ಈ ಹಬ್ಬವನ್ನು ಆಚರಿಸೋಣ ಎಂದರು
ಬಿ.ಕೆ. ವಾಣಿಶ್ರೀ ಮಾತನಾಡಿ ಸಮೃದ್ಧಿ, ಸಂಪ್ರೀತಿ, ಸಮಾನತೆ, ಸೌಜನ್ಯತೆ ದೀಪದ ಬೆಳಕಿನಂತೆ ಎಲ್ಲೆಡೆ ಹರಡಲಿ ಎಂಬುದೇ ದೀಪಾವಳಿಯ ಉದ್ದೇಶವಾಗಿದೆ. ಸರ್ವರಿಗೂ ಈ ದೀಪಾವಳಿ ಮಂಗಳಮಯವಾಗಿರಲಿ ಎಂದು ಹಾರೈಸಿದರು.
ಅಷ್ಟ ಲಕ್ಷಿö್ಮಯರ ಪ್ರದರ್ಶನವನ್ನು ಸಚಿವ ಶಿವರಾಮ ಹೆಬ್ಬಾರ ಪತ್ನಿ ವನಜಾಕ್ಷಿ ಹೆಬ್ಬಾರ ಸಾಂಕೇತಿಕವಾಗಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ ಅಧ್ಯಕ್ಷೆ ಸುನಂದಾ ದಾಸ್, ಉಪಾಧ್ಯಕ್ಷೆ ಶ್ಯಾಮಿಲಿ ಪಾಟಣಕರ, ಮುಕ್ತಾ ಶಂಕರ, ಸರೋಜಾ ಹೆಗಡೆ, ಮಮತಾ ಕೃಷ್ಣ ಮೂರ್ತಿ , ರಚನಾ ಹೆಗಡೆ ,ಪ್ರಭಾವತಿ ಗೋವಿ,ಶಾರದಾ ಭಟ್ ಮುಂತಾದವರು ಇದ್ದರು.ಪ್ರದರ್ಶನ ಮೂಲಕ ದಲ್ಲಿ ಅಷ್ಟ ಲಕ್ಷ್ಮಿಯರು ಧರೆಗಿಳಿದು ಬಂದಂತಾಗಿ ಜನಾಕರ್ಷಣೆಗೊಂಡಿತು.
Leave a Comment