ಕಾರವಾರ : ಗ್ರಾಮೀಣ ಐಟಿ ರಸಪ್ರಶ್ನೆ -2021ರ ಕರ್ನಾಟಕ ರಾಜ್ಯ ಫೈನಲ್ಸ್ನಲ್ಲಿ ಶಿರಸಿಯ ಲಯನ್ಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಜಯಂತ್ ಹೆಗಡೆ ಪ್ರಶಸ್ತಿ ಗೆದ್ದಿದ್ದಾರೆ ಎಂದು ಸ್ವರ್ದಿ ಆಯೋಜಿಸಿದ್ದ ಟಾಟಾ ಕನ್ಸಲ್ಪೆನ್ಸಿ ಸರ್ವೀಸಸ್ (ಟಿಸಿಡಸ್) ಮತ್ತು ಕರ್ನಾಟಕ ಸರ್ಕಾರದ ಎಲೆಕ್ಟಾçನಿಕ್ಸ್, ಐಟಿ, ಬಿಟಿ ಹಾಗೂ ವಿಚ್ಞಾನ ಮತ್ತು ತಂತ್ರಚ್ಞಾನ ಇಲಾಖೆ ಪ್ರಕಟಿಸಿದೆ.

ಆನ್ ಲೈನ್ ಪರೀಕ್ಷಗಳು ಮತ್ತು ವರ್ಚುವಲ್ ರಸಪ್ರಶ್ನೆ ಕಾರ್ಯಕ್ರಮಗಳ ಸಂಯೋಜನೆಯಾಗಿದ್ದ ಈ ಕಾರ್ಯಕ್ರಮ ವಿದ್ಯಾರ್ಥಿಗಳಿಗೆ ಹೊಸ ಟಿಜಿಟಲ್ ಅನುಭವವನ್ನು ನೀಡಿತು. ರಸಪ್ರಶ್ನೆಯಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳ 8 ರಿಂದ 12ನೇ ತರಗತಿಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಪೂರ್ವಭಾವಿ ಆನ್ ಲೈನ್ ಪರೀಕ್ಷೆಯ ನಂತರ, ಆರು ವಿದ್ಯಾರ್ಥಿಗಳು ವರ್ಚುವಲ್ ಫೈನಲ್ಗೆ ಅರ್ಹತೆ ಪಡೆದರು. ಫೈನಲ್ಸ್ ಐದು ವಿಭಾಗಗಳನ್ನು ಹೊಂದಿತ್ತು. ಅವುಗಳೆಂದರೆ ಬೈಟ್ ಕ್ಲೌಡ್ಸ್, ಬೈಟ್ ರೆಕಗ್ನಿಷನ್, ಬೈಟ್ಸ್ ಅಗೈಲ್, ಇದು ಐಟಿ ಡೊಮೇನ್ನಲ್ಲಿ ವಿದ್ಯಾರ್ಥಿಗಳ ಜ್ಞಾನವನ್ನು ಪರೀಕ್ಷಿಸಿತು ಮತ್ತು ಪರ್ಯಾಯವಾಗಿ ಯೋಚಿಸಲು ಪ್ರೇರೇಪಿಸಿತು.
ಮಂಡ್ಯ ಜಿಲ್ಲೆ ಪಾಂಡುವಪುರದ ಎಸ್ಟಿಜಿ ಪಬ್ಲಿಕ್ ಸ್ಕೂಲ್ನ ಜಯಂತ್ ಎಂ ರನ್ನರ್ ಅಪ್ ಆಗಿ ಹೊರಹೊಮ್ಮಿದರು. ವಿಜೇತ ವಿದ್ಯಾರ್ಥಿ ರೂ.10,000 ಮೌಲ್ಯದ ಗಿಫ್ಟ್ ವೋಚರ್ ಮತ್ತು ಎರಡನೇ ಸ್ಥಾನ ಪಡೆದ ವಿದ್ಯಾರ್ಥಿ ರೂ. 7,000 ಮೌಲ್ಯದ ಬಹುಮಾನ ಗೆದ್ದರು. ವಿಜೇತ ವಿದ್ಯಾರ್ಥಿ ನವೆಂಬರ್ನಲ್ಲಿ ನಡೆಯುವ ರಾಷ್ಟç ಮಟ್ಟದ ಬಹುಮಾನಗಳಲ್ಲಿ ವಜೇತರಿಗೆ ರೂ. 1,00,000 ಮತ್ತು ರನ್ನರ್ ಅಪ್ಗೆ ರೂ 50,000 ಟಿಸಿಎಸ್ ಶೈಕ್ಷಣಿಕ ವಿದ್ಯಾರ್ಥಿವೇತನಗಳು ಲಭ್ಯವಾಗುತ್ತವೆ ಎಂದು ಪ್ರಕಟಣೆ ಹೇಳಿದೆ.
Leave a Comment