ಚಿನ್ನಾಭರಣ, ಉಡುಗೊರೆ ನೀಡುವ ನೆಪದಲ್ಲಿ 4.49 ಲಕ್ಷ ರೂಪಾಯಿ ಗುಳುಂ
ಹುಬ್ಬಳ್ಳಿ : ಫೇಸ್ ಬುಕ್ ಮೂಲಕ ಪರಿಚಯವಾದ ಯುವಕನೊಬ್ಬ ತಾನು ಲಂಡನ್ನಲ್ಲಿ ವಾಸವಾಗಿದ್ದು ಚಿನ್ನಾಭರಣ, ಉಡುಗೊರೆ ಕಳುಹಿಸಿದ್ದೇನೆಂದು ನಂಬಿಸಿ ಧಾರವಾಡದ ಮಹಿಳೆಯೊಬ್ಬರಿಂದ 4,49,900 ರೂ. ಹಣ ವರ್ಗಾಯಿಸಿಕೊಂಡು ವಂಚಿಸಿರುವ ಕುರಿತು ಸೈಬರ್ ಕ್ರೆöÊಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಧಾರವಾಡ ರಾಮನಗರದ ಮಹಿಳೆಯೊಬ್ಬರನ್ನು ಫೇಸ್ ಬುಕ್ ಮೂಲಕ ಯುವಕನೊಬ್ಬ ಪರಿಚಯಿಸಿಕೊಂಡಿದ್ದ. ತಾನು ಲಂಡನ್ನಲ್ಲಿ ವಾಸವಾಗಿದ್ದು, ಉನ್ನತ ಉದ್ಯೋಗದಲ್ಲಿರುವುದಾಗಿ ಕೇಳಿಕೊಂಡಿದ್ದ. ತನ್ನ ಅಡಚಣಿಸಲುವಾಗಿ ಮಹಿಳೆ ಯುವಕನಲ್ಲಿ ಹಣದ ಸಹಾಯ ಕೇಳಿದ್ದರು. ಮೊಬೈಲ್, ಕ್ಯಾಮರಾ, ವಾಚ್, ಚಿನ್ನಾಭರಣ, ಬೆಲೆಬಾಳುವ ಉಡುಗೊರೆ ಕಳುಹಿಸುತ್ತೇನೆ ಎಂದು ಆತ ನಂಬಿಸಿದ್ದ.
ಬಳಿಕ ಮತ್ತೊಬ್ಬ ವ್ಯಕ್ತಿ ಕರೆ ಮಾಡಿ. ಲಂಡನ್ ದೇಶದಿಂದ ನಿಮ್ಮ ವಿಳಾಸಕ್ಕೆ ಗಿಫ್ಟ್ ಬಂದಿದೆ. ಅದನ್ನು ನಿಮಗೆ ಕಳುಹಿಸಲು ಪಾರ್ಸೆಲ್ ಜಾರ್ಜ್ 35,000 ರೂ. ಕಳುಹಿಸಬೇಕು. ಮತ್ತೊಂದು ಬಾಕ್ಸ್ನಲ್ಲಿ ವದೇಶಿ ಕರೆನ್ಸಿ ಇದೆ. ಅದನ್ನು ಭಾರತೀಯ ಹಣವಾಗಿ ಪರಿವರ್ತಿಸಲು 87,000 ರೂ, ಆದಾಯ ತೆರಿಗೆ 2,40,000 ರೂ, ಕಳುಹಿಸಬೇಕು ಎಂದು ಹೇಳಿದ್ದ. ನಂತರ ಹಾಲೆಂಡ್ ದೇಶದ 20,000 ಯಾರೋ ನಿಮ್ಮ ಖಾತೆಗೆ ಜಮೆಯಾಗಿದೆ ಎಂದು ಮತ್ತೊಬ್ಬ ವ್ಯಕ್ತಿ ವಾಟ್ಸ್ ಆ್ಯಪ್ ಮುಲಕ ಪೋಟೋ ಕಳುಹಿಸಿದ್ದ ಈ ಹಣವನ್ನು ಭಾರತೀಯ ರೂಪಾಯಿಯಾಗಿ ಪರಿವರ್ತಿಸಲು 57,000 ರೂ. ತೆರಿಗೆ ಕಟ್ಟಬೇಕು ಎಂದು ಮಹಿಳೆ ಹಾಗೂ ಆಕೆಯ ಮಗನ ಖಾತೆಯಿಂದ ಹಂತವಾಗಿ ಹಣ ವರ್ಗಾಯಿಸಿಕೊಂಡು ವಚಿಸಿದ್ದಾರೆಂದು ದೂರಿನಲ್ಲಿ ದಾಖಲಾಗಿದೆ. ಸೈಬರ್ ಕ್ರೆöÊಂ ಠಾಣೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
Leave a Comment