ನಗರದ ಸರಕಾರಿ ಕಲಾ ಮತ್ತು ವಿಜ್ಞಾನ ಸ್ವಾಯತ್ತ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಿಗಾಗಿ ಅರ್ಜಿ ಕರೆಯಲಾಗಿದೆ. ೨೦೨೧-೨೨ ನೇ ಸಾಲಿನ ಪದವಿ 1,3 ಮತ್ತು5 ನೇ ಸೆಮಿಸ್ಟರ್ ನಲ್ಲಿ ಜೈವಿಕ ತಂತ್ರಜ್ಞಾನ, ಸಸ್ಯ ಶಾಸ್ತ್ರ, ಪ್ರಾಣಿಶಾಸ್ತ್ರ, ರಸಾಯನಶಾಸ್ತ್ರ, ಭೌತಶಾಸ್ತ್ರ, ವಾಣಿಜ್ಯ ಶಾಸ್ತ್ರ ಅರ್ಥಶಾಸ್ತ್ರ, ಆಂಗ್ಲ ವಿಷಯಗಳಿಗೆ ಅತಿಥಿ ಉಪನ್ಯಾಸಕರು ಬೇಕಾಗಿದ್ದಾರೆ.
ಅರ್ಜಿ ಸಲ್ಲಿಸಬಯಸುವವರು ತಮ್ಮ ವಿಷಯದಲ್ಲಿ ಶೇ ೫೫ ಅಂಕಗಳನ್ನು ಪಡೆದು ಪಾಸಾಗಿರಬೇಕು. ನೆಟ್, ಕೆ.ಸೆಟ್, ಪಿ. ಎಷ್, ಡಿ ಹಾಗೂ ಸರಕಾರಿ ಪದವಿ ಕಾಲೇಜಿನಲ್ಲಿ ಸೇವೆ ಸಲ್ಲಿಸಿದವರಿಗೆ ಪ್ರಾಶಸ್ತö್ಯ ನೀಡಲಾಗುವುದು.
ಅರ್ಜಿಯನ್ನು ನವೆಂಬರ್ ೧೦ ರೊಳಗೆ ಕಾಲೇಜಿನ ಕಛೇರಿಗೆ ತಲುಪಿಸಲು ಪ್ರಾಂಶುಪಾಲರಾದ ವಿಜಯಾ ಡಿ.ನಾಯ್ಕ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ : ೦೮೩೮೨- ೨೨೬೩೬೨ ([email protected] ) ಸಂಪರ್ಕಿಸಬಹುದು.
Leave a Comment