
ಯಲ್ಲಾಪುರ: ಪರಿಸರ ಮಾಲಿನ್ಯ, ಹಚ್ಚೆಚ್ಚು ತರಕಾರಿ ಬೆಳಸಿ ಸಧೃಡ ಸಮಾಜ ಬೆಳಸಿ ಹಾಗೂಹೆಣ್ಣು ಶಿಶು ಭ್ರೂಣ ಹತ್ಯೆ ಖಂಡಿಸಿ, ಇಂಧನ ಉಳಿಸಿ ಸಂದೇಶ ಸಾರುವ ಮೂಲಕ ಜಾಗೃತಿ ಮೂಡಿಸಲು ಪೂನಾದಿಂದ ಕನ್ಯಾಕುಮಾರಿಯರೆಗೆ ಹೊರಟಿರುವ ಸೈಕಲ್ ಜಾಥಾ ಪಟ್ಟಣಕ್ಕೆ ಆಗಮಿಸಿದ ಸಂದರ್ಭದಲ್ಲಿ ಹಿರಿಯರಾದ ಪದ್ಮನಾಭ ಶಾನಭಾಗ ಹಾಗೂ ಸತ್ಯನ್ ನಾಯರ್ ರಾಷ್ಟಿçÃಯ ಹೆದ್ದಾರಿ ಯ ಇಂದ್ರಪ್ರಸ್ಥ ಹೋಟೆಲ್ ಬಳಿ ಸ್ವಾಗತಿಸಿದರು.
ಪೂನಾದ ಹಡಪ್ಸರ್ ಸೈಕಲ್ ಗ್ರುಪ್ ಮತ್ತು ವಿಸ್ಕ್ ಅಗ್ರೋ ಪ್ರೆöÊ.ಲಿ ಇವರು ಅಯೋಜಿಸಿರುವ ನ.೭ ರಿಂದ ಹೊರಟ ಈ ಜಾಥಾದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗದಲ್ಲಿರುವ ೧೨ ಜನರ ತಂಡ ಸೈಕಲ್ ಮೂಲಕ ಜಾಗೃತಿ ಪ್ರವಾಸ ಕೈಗೊಂಡಿದ್ದು, ಈಗಾಗಲೆ ೪೫೫ ಕಿ.ಮಿಗಳನ್ನಕ್ರಮಿಸಿ ಯಲ್ಲಾಪುರಕ್ಕೆ ಬಂದಿದ್ದು ಮಂಗಳೂರು ಮೂಲಕ ೧೦ ದಿನಗಳಲ್ಲಿ ಕನ್ಯಾಕುಮಾರಿ ತಲುಪುವ ಗುರಿ ಇದೆ ಎಂದು ತಂಡದ ಸದಸ್ಯ ವಿಸ್ಕ್ ಅಗ್ರೋ ಪ್ರೆöÊ.ಲಿ ಮಾಲಕ ಸಾತವೀರ ರೊಟ್ಟಿ ತಿಳಿಸಿದರು. ಮುಖ್ಯವಾಗಿ ಇಂದು ಹೆಣ್ಣು ಮಕ್ಕಳನ್ನು ಬೆಳೆಸುವದು ಆತಂಕವೆAದು ಭಾವಿಸದೇ ಅವರಿಗೆ ಸೂಕ್ತ ಮಾರ್ಗದರ್ಶನ ವಿದ್ಯಾಭ್ಯಾಸ ನೀಡಿ ಸಬಲರಾಗುವಂತೆ ಪ್ರೋತ್ಸಾಹ ನೀಡುವಂತಾದರೆ ನಮ್ಮ ಕಾರ್ಯ ಸಾರ್ಥಕವಾದಂತಾಗುತ್ತದೆ.ಅದೇ ರೀತಿ ಸಿದ್ದ ಆಹಾರ ಸಂಸ್ಕೃತಿಯಿAದ ತರಕಾರಿ ಬಳಕೆ , ಸೇವನೆ ಕಡಿಮೆಯಾಗುತ್ತಿದೆ. ಇದರಿಂದ ದೇಹಾರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ .ತರಕಾರಿ ಸೇವಿಸಿ ಸಧೃಡ ಸಮಾಜ ಬೆಳಸಿ ಎಂಬ ನಮ್ಮ ಘೋಷವಾಕ್ಯ ಮೂಲಕ ಜನರನ್ನು ತಲುಪುವ ಉದ್ದೇಶ ನಮ್ಮದಾಗಿದೆ ಎಂದರು.ತAಡದಲ್ಲಿದೀಪಕ ಕಾನಸೆ ,ಮಹೇಶ, ವಿಕಾಸ, ಪ್ರಶಾಂತ, ಅಪ್ಪಾಸಾಹೆಬ, ಸಂಗ್ರಾಮ, ಯುವರಾಜ, ಸುರೇಶ,ಸಾತ ವೀರ ರೊಟ್ಟಿ,ಸುನೀಲ, ಮೌಲಿ ,ವಿನಯ ರೊಟ್ಟಿ ಇದ್ದರು
Leave a Comment