ಹೊನ್ನಾವರ : ತಾಲೂಕಿನ ಮತದಾರರ ಸಮಸ್ಯೆ ಆಲಿಸಿ ಬಗೆಹರಿಸಲು ಪ್ರತಿ ತಾಲೂಕಿವನಲ್ಲಿ ಶಾಸಕರ ಕಛೇರಿಯನ್ನು ಸರ್ಕಾರವೇ ನೀಡುತ್ತದೆ. ಅದೇ ರೀತಿ ಹೊನ್ನಾವರಕ್ಕೂ ಕೂಡಾ ತಾಲೂಕ ಪಂಚಾಯತಿ ಹಳೇ ಕಟ್ಟಡದಲ್ಲಿ ಮೂರು ವರ್ಷದ ಹಿಂದೆಯೆ ಕಛೇರಿಯನ್ನು ನೀಡಲಾಗಿತ್ತು. ಇದನ್ನು ಉತ್ಸಾಹದಿಂದಲೇ ಆಗಮಿಸಿ ಶಾಸಕ ದಿನಕರ ಶೆಟ್ಟಿ ಆಗ ಉದ್ಘಾಟಿಸಿದ್ದರು.
ಆದರೆ ಇದು ಉದ್ಗಾಟನೆಗೊಂಡ ಬಳಿಕ ಒಂದೊ ಎರಡೊ ಬಾರಿ ಶಾಸಕರು ಆಗಮಿಸಿದ್ದರು. ಸರಿಸುಮಾರು ಎರಡು ವರ್ಷದಿಂದ ಶಾಸಕರು ಆಗಮಿಸುದು ಇರಲಿ ಈ ಕಟ್ಟಡದ ಬಾಗಿಲೆ ತೆಗೆದಿಲ್ಲದಿರುವುದು ಆಶ್ಚರ್ಯಮೂಡಿಸಿದೆ. ಇವರ ಜೊತೆಯೆ ಪ್ರಥಮಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಭಟ್ಕಳ ಶಾಸಕ ಸುನೀಲ ನಾಯ್ಕ ಕಛೇರಿಯನ್ನು ಪಕ್ಕದಲ್ಲೇ ಉದ್ಘಾಟಿಸಿ ಈಗ ಸುಸಜ್ಜಿತ ಸ್ಥಳದಲ್ಲಿ ಬದಲಾವಣೆ ಮಾಡಿರುದಲ್ಲದೇ ಪ್ರತಿನಿತ್ಯವು ಕ್ಷೇತ್ರದ ಮತದಾರರ ಸಂಕಷ್ಟ ಆಲಿಸಲು ಆಪ್ತ ಸಹಾಯಕರನ್ನು ಇಡುವ ಪರಿಪಾಠ ಇಟ್ಟುಕೊಂಡಿದ್ದಾರೆ.

ಹೊನ್ನಾವರ ತಾಲೂಕ ಎರಡು ವಿಧಾನಸಭಾ ಕ್ಷೇತ್ರವನ್ನು ಒಳಗೊಂಡಿದ್ದು, ಪಟ್ಟಣ ಹಾಗೂ ಒಂಬತ್ತು ಗ್ರಾಮಪಂಚಾಯತಿ ಕುಮಟಾ ಹೊನ್ನಾವರ ಕ್ಷೇತ್ರದ ವ್ಯಾಪ್ತಿಗೆ ಬರಲಿದೆ. ಇನ್ನು ತಾಲೂಕಿನ ಉಳಿದ ಗ್ರಾಮ ಹಾಗೂ ನೂತನವಾಗಿ ಅಸ್ಥಿತ್ವಕ್ಕೆ ಬಂದ ಮಂಕಿ ಪಟ್ಟಣ ಪಂಚಾಯತಿ ಭಟ್ಕಳ ಕ್ಷೇತ್ರಕ್ಕೆ ಬರಲಿದೆ. ಪಟ್ಟಣ ಹಾಗೂ ಗ್ರಾಮೀಣ ಭಾಗದಲ್ಲಿ ರಸ್ತೆ, ಕುಡಿಯುವ ನೀರು, ವೈದ್ಯಕೀಯ ಶಿಕ್ಷಣ ಸೇರಿದಂತೆ ಪ್ರತಿ ಇಲಾಖೆಯಲ್ಲಿಯೂ ಸಮಸ್ಯೆ ಇದೆ. ಶಾಸಕ ದಿನಕರ ಶೆಟ್ಟಿ ಹೊನ್ನಾವರದ ಸಮಸ್ಯೆ ಆಲಿಸಲು ಈ ಕಛೇರಿಗೆ ಬರದೇ ಇರುವುದರಿಂದ ಕ್ಷೇತ್ರದ ಮತದಾರರು ಹಿಡಿಶಾಪ ಹಾಕುತ್ತಿದ್ದಾರೆ.
ಆರಂಭದಲ್ಲಿ ಶನಿವಾರ ಕಛೇರಿಗೆ ಆಗಮಿಸದೇ ಇದ್ದರೂ, ತಹಶಿಲ್ದಾರ ಕಚೇರಿ ತಾಲೂಕ ಆಸ್ಪತ್ರೆಗಳಿಗೆ ಭೇಟಿ ನೀಡುವ ಕಾಯಕದಲ್ಲಿದ್ದರು. ಕಳೆದ ಒಂದು ವರ್ಷದಿಂದ ಇದನ್ನು ಬಿಟ್ಟಿದ್ದಾರೆ. ಶಾಸಕರ ಈ ನಡೆಯಿಂದ ಕ್ಷೇತ್ರದ ಮತದಾರರ ಜೊತೆ ಪಕ್ಷದ ಕಾರ್ಯಕರ್ತರು ತಮ್ಮ ಅಸಹಾಯಕತೆಯನ್ನು ತೋರಿಸುತ್ತಿದ್ದು, ಚುನಾವಣೆಯ ಸಮಯದಲ್ಲಿ ಮತಕೇಳಲು ಹೇಗೆ ಸಾರ್ವಜನಿಕರಿಗೆ ಮುಖ ತೋರಿಸಬೇಕು ಎನ್ನುವ ಪ್ರಶ್ನೆ ತಮ್ಮ ಒಡನಾಡಿಗಳೊಂದಿಗೆ ಹಂಚಿಕೊಳ್ಳುತ್ತಿದ್ದಾರೆ.
ಈ ಹಿಂದೆ ಹೆದ್ದಾರಿ ಅಗಲೀಕರಣ ಸಮಸ್ಯೆ ಬಗ್ಗೆ ಮನವಿ ನೀಡಲು ಕನ್ನಡಪರ ಸಂಘಟನೆಯವರು ಶಾಸಕರಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಮನವಿ ಸಲ್ಲಿಸುದಿದೆ. ನಿಮ್ಮ ಕಛೇರಿ ಅಥವಾ ಐಬಿಗೆ ಬರಲು ಕೇಳಿಕೊಂಡಾಗ, ನಾನು ಪಟ್ಟಣದ ದುರ್ಗಾಕೇರಿಗೆ ಬರುತ್ತೇನೆ ಇಲ್ಲದೇ ಹೊದಲ್ಲಿ ಖಾಸಗಿ ಹೋಟೇಲಗೆ ಆಗಮಿಸುತ್ತೇನೆ ಅಲ್ಲಿಯೆ ಮನವಿ ನೀಡಿ ನೀವು ಹೇಳಿದ ಸ್ಥಳಕ್ಕೆ ಬಂದರೆ ಸಾರ್ವಜನಿಕರು ಆಗಮಿಸುತ್ತಾರೆ ಎಂದು ಹೇಳಿರುವ ಆಡಿಯೋ ವೈರಲ್ ಆಗಿತ್ತು. ಜನಪ್ರತಿನಿಧಿಯಾದವರೂ ಜನರ ಸಮಸ್ಯೆ ಆಲಿಸಲು ಸಾಧ್ಯವಿಲ್ಲದಿದ್ದರೇ ಆ ಸ್ಥಾನದಲ್ಲಿ ಯಾಕಿರಬೇಕು ಎನ್ನುವ ಮಾತು ಕೂಡಾ ಕೇಳಿಬಂದಿತ್ತು.
ಶಾಸಕರು ತಾಲೂಕ ಕೇಂದ್ರ ಅಥವಾ ಗ್ರಾಮೀಣ ಭಾಗಕ್ಕೆ ಆಗಮಿಸುದು ಪಕ್ಷದ ಕೆಲ ಕಾರ್ಯಕರ್ತರಿಗೆ ಮಾತ್ರ ಮಾಹಿತಿ ಇರಲಿದ್ದು, ಉಳಿದ ಸಾರ್ವಜನಿಕರಿಗೆ ಮಾಹಿತಿಯೇ ಇರುವುದಿಲ್ಲ. ಅಲ್ಲದೇ ಸಮಸ್ಯೆ ಹೇಳಿಕೊಳ್ಳಲು ನೆರೆಯ ಕುಮಟಾಕ್ಕೆ ಹಗೋಗಬೇಕಾಗಿದ್ದು, ಅಲ್ಲಿಗೆ ಹೋದರು ಶಾಸಕರು ಸಿಗುವುದು ಕಡಿಮೆ ಒಮ್ಮೊಮ್ಮೆ ಬೆಂಗಳೂರಿಗೆ ತೆರಳುದರಿಂದ ಎಷ್ಟೋ ಸಮಸ್ಯೆಗಳನ್ನು ಶಾಸಕರ ಗಮನಕ್ಕೆ ತರಲು ಕ್ಷೇತ್ರದ ಮತದಾರರು ಹೈರಾಣಾಗುತ್ತಿದ್ದಾರೆ. ಈ ಹಿಂದೆಯೇ ಸಚೀವರ ಎದುರಿಗೆ ಶಾಸಕ ದಿನಕರ ಶೆಟ್ಟಿ ಹೇಳಿದಂತೆ ಈಗಲೇ ಸಮಸ್ಯೆ ಬಗೆಹರಿಸುದು ಹಾಗೂ ಕಛೇರಿಯಲ್ಲಿದ್ದರೆ ಜನ ಮರೆತು ಹೋಗುತ್ತಾರೆಂದು ಚುನಾವಣೆಯ ಸಮಯದಲ್ಲಿ ಬರುವ ಸಿದ್ದತೆಯಲ್ಲಿದ್ದಾರೆನೋ ಎನ್ನುವ ವಂಗ್ಯದ ಮಾತು ಕೇಳಿಬರುತ್ತಿದೆ.
Leave a Comment