ಭಟ್ಕಳ: ಮಹಿಳೆಯೋರ್ವಳು ಕಾಣೆಯಾಗಿರುವ ಕುರಿತು ಇಲ್ಲಿನ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕಾಣೆಯಾದ ಮಹಿಳೆ ಚಿತ್ರಾಪುರದ ಹೊಸಗದ್ದೆ ನಿವಾಸಿ ಮಮತಾ ಜಗದೀಶ ನಾಯ್ಕ (೨೩) ಎನ್ನುವಳಾಗಿದ್ದು ಈಕೆಗೆ ಕಳೆದ ಕೆಲವು ಸಮಯದ ಹಿಂದೆ ಫೇಸ್ಬುಕ್ನಲ್ಲಿ ಗೋಕಾಕ ತಾಲೂಕಿನ ಪೊಲಿಸ್ ಪ್ರಕಾಶ ಅಣ್ಣಪ್ಪ ಗಾಡಿವಡ್ಡರ್ ಎನ್ನುವವನ ಪರಿಚಯವಾಗಿದ್ದು ಕಳೆದ ಅ.೨೫ರಂದು ಆತ ಭಟ್ಕಳಕ್ಕೆ ಬಂದು ಈಕೆಯ ವಿಚಾರವಾಗಿ ಗಲಾಟೆ ಮಾಡಕೊಂಡು ಹೋಗಿದ್ದ ಎನ್ನಲಾಗಿದೆ.

ನಂತರ ಬಂದು ತಾನು ಆಕೆಯ ತಂಟೆಗೆ ಬರುವುದಿಲ್ಲ ಎಂದು ಭರವಸೆ ಕೊಟ್ಟು ಹೋಗಿದ್ದವನು ಮತ್ತೆ ಪುನ: ನ.೧೧ಕ್ಕೆ ಬಂದು ಆಕೆಯೊಂದಿಗೆ ಮಾತನಾಡಿಕೊಂಡು ಹೋಗಿದ್ದು ಕೇವಲ ಅರ್ಧ ಗಂಟೆಯೊಳಗೆ ಆಕೆಯು ಯಾರಿಗೂ ಹೇಳದೇ ಮಾರುಕೇರಿಯ ಪಿರ್ಯಾದಿಯ ಮನೆಯಿಂದ ನಾಪತ್ತೆಯಾಗಿದ್ದಾಳೆ ಎಂದು ಆಕೆಯ ಸಹೋದರ ರಮೇಶ ನಾರಾಯಣ ನಾಯ್ಕ ಗ್ರಾಮೀಣ ಠಾಣೆಯಲ್ಲಿ ದೂರು ನೀಡಿದ್ದಾರೆ. ದೂರನ್ನು ದಾಖಲಿಸಿಕೊಂಡ ಗ್ರಾಮೀಣ ಠಾಣೆಯ ಸಬ್ ಇನ್ಸಪೆಕ್ಟರ್ ಭರತ್ ತನಿಖೆ ನಡೆಸಿದ್ದಾರೆ.
Leave a Comment