ಕಾರವಾರ:ಕೇರಳದ ವೈನಾಡ್ ಮೂಲದ ಮೆಲ್ವಿನ್ ಥೋಮಸ್ ಅವರು ರಕ್ತದಾನದ ಬಗ್ಗೆ ಅರಿವು ಮೂಡಿಸಲು ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗೆ ಪಾದಯಾತ್ರೆ ಹಮ್ಮಿಕೊಂಡಿದ್ದು ಇಂದು ಕಾರವಾರಕ್ಕೆ ತಲುಪಿದ್ದಾರೆ.

ಕಾರವಾರ ತಲುಪಿದ ಇವರಿಗೆ ಉತ್ತರಕನ್ನಡದ ಶೇರ್ ಬ್ಲಡ್ ಸೇವ್ ಲೈಫ್ ರಕ್ತದಾನಿಗಳ ತಂಡದ ಸಂಸ್ಥಾಪಕ ಶುಭಂ ಜಿ. ಕಳಸ ಮೆಲ್ವಿನ್ ಅವರನ್ನು ನಗರಕ್ಕೆ ಬರಮಾಡಿಕೊಂಡರು.
ಮೆಲ್ವಿನ್ ಇವರು ಒಟ್ಟು 3500 ಕಿಮೀ ಪಾದಯಾತ್ರೆ ಹಮ್ಮಿಕೊಂಡಿದ್ದು ಈವರೆಗೂ 930ಕಿಮೀ ಪಾದಯಾತ್ರೆ ಮುಗಿಸಿದ್ದು ಕಾರವಾರದಲ್ಲಿ ವಿಶ್ರಾಂತಿ ಪಡೆದು ಮುಂದಿನ ಯಾತ್ರೆ ನಡೆಸಲಿದ್ದಾರೆ.
Leave a Comment