
ಯಲ್ಲಾಪುರ : ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಸುಮಾರು 3.40 ಲಕ್ಷ ಮೌಲ್ಯದ ಜಾನುವಾರಗಳನ್ನು ಯಲ್ಲಾಪುರ ಪೋಲಿಸರು ವಸಪಡಿಸಿಕೊಂಡಿರುವ ಘಟನೆ ಪಟ್ಟಣದ ಜೋಡುಕೆರೆ ಬಳಿ ನಡೆದಿದೆ.

ಮಹಾರಾಷ್ಟ್ರದ ಬಡೋಜ್ನಿಂದ ಕೇರಳಕ್ಕೆ ಲಾರಿಯಲ್ಲಿ ಹಿಂಸಾತ್ಮಕ ರೀತಿಯಲ್ಲಿ ಸಾಗಿಸಲಾಗುತ್ತಿದ್ದ 1.50 ಲಕ್ಷ ಮೌಲ್ಯದ 10 ಕೋಣಗಳು, 1.70 ಲಕ್ಷ ಮೌಲ್ಯದ 10 ಎಮ್ಮೆಗಳು ಹಾಗೂ 20 ಸಾವಿರ ಮೌಲ್ಯದ 4 ಎಮ್ಮೆ ಕರುಗಳನ್ನು ಯಲ್ಲಾಪುರ ಪೋಲಿಸರು ರಾಷ್ಟ್ರೀಯ ಹೆದ್ದಾರಿಯ ಜೋಡುಕೆರೆ ಬಳಿ ಆರೋಪಿ ಸಮೇತರಾಗಿ ವಶಪಡಿಸಿಕೊಂಡಿದ್ದಾರೆ. ಮಹಾರಾಷ್ಟ್ರದ ಪುಣೆಯ ನಿಂಬೋಡಿ ಗ್ರಾಮದ ಸಂತೋಷ ಶಿವಾಜಿ ಘುಮ್ರೆ(44), ಪುಣೆಯ ಸನಸರ್ ಗ್ರಾಮದ ಶ್ಯಾಮ ಪ್ರಲ್ಹಾದ ಭೋಸ್ಲೆ (44), ಕೇರಳದ ತ್ರಿಶೂರ್ ಜಿಲ್ಲೆಯ ಮುಕುಂದಪುರಮ್ ತಾಲೂಕಿನ ಜಿತ್ ನಾರಾಯಣ ಕುಟ್ಟಿ (43), ತ್ರಿಶೂರ್ ಜಿಲ್ಲೆಯ ತುಟಿಪಾಲದ ಶಶಿ ಅಯ್ಯಪ್ಪ ಕುಟ್ಟಿ (53) ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿಂದ 6 ಲಕ್ಷ ಮೌಲ್ಯದ ಲಾರಿಯನ್ನು ವಶಪಡಿಸಿಕೊಳ್ಳಲಾಗಿದೆ. ಪಿ ಎಸ್ ಆಯ್ ಪ್ರಿಯಾಂಕಾ ನ್ಯಾಮಗೌಡ ಈ ಕುರಿತು ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು , ತನಿಖೆ ನಡೆಸಲಾಗಿದೆ.
Leave a Comment