ಯಲ್ಲಾಪುರ: ಪುಸ್ತಕ ಹಾಗೂ ಪತ್ರಿಕೆಗಳನ್ನು ಓದುವ ಸಂಸ್ಕೃತಿಯನ್ನ ಬೆಳೆಸಿಕೊಳ್ಳಬೇಕು ಇದರಿಂದ ಪ್ರಚಲಿತ ವಿದ್ಯಮಾನ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಹಿರಿಯ ಕವಿ ನಾಗೇಶ ನಾಯ್ಕ ಹೇಳಿದರು. ಅವರು ಪಟ್ಟಣದ ಜಿಲ್ಲಾ ಕೇಂದ್ರದ ಶಾಖಾ ಗ್ರಂಥಾಲಯದಲ್ಲಿ ಶನಿವಾರ ಸಂಜೆ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹವನ್ನು ಸರಳವಾಗಿ . ಉಧ್ಘಾಟಿಸಿ ಮಾತನಾಡಿದರು.
ಕಾರವಾರದ ಜಿಲ್ಲಾ ಕೇಂದ್ರ ಗ್ರಂಥಾಲಯದ ಗ್ರಂಥಪಾಲಕ ವಿಶ್ರಾಮ ನಾಯಕ ಮಾತನಾಡಿ, ಗ್ರಂಥಾಲಯ ಸಪ್ತಾಹವು ದೇಶಾದ್ಯಂತ ಆಚರಿಸಲಾಗುತ್ತಿದೆ. ಪುಸ್ತಕ ಓದುವ ಸಂಸ್ಕೃತಿಯನ್ನು ಬೆಳೆಸಲು ಈ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ಇತ್ತೀಚೆಗೆ ಪುಸ್ತಕ ಓದುವವರ ಸಂಖ್ಯೆ ಕ್ಷೀಣಿಸುತ್ತಿರುವುದು ಬೇಸರದ ಸಂಗತಿಯಾಗಿದೆ ಎಂದರು.
ಪತ್ರಕರ್ತ ಜಯರಾಜ ಗೋವಿ ಮಾತನಾಡಿ ಪುಸ್ತಕ ಓದುವದರಿಂದ ಏಕಾಗ್ರತೆ ಹೆಚ್ಚುವದರಿಂದ ಮಕ್ಕಳಿಗೆ ಓದುವ ಹವ್ಯಾಸವನ್ನು ಬೆಳೆಸಬೇಕು. ಗ್ರಂಥಪಾಲಕ ಬಾಸೂರವರ ನಿರ್ವಹಣೆಯಿಂದ ಉತ್ತಮ ಗ್ರಂಥಾಲಯವೆAದು ಗುರುತಿಸಿಕೊಂಡು ಪುಸ್ತಕ ಓದುವ ಆಸಕ್ತಿಯನ್ನು ಹೆಚ್ಚಿಸಿದೆ. ಇದೀಗ ಡಿಜಿಟಲ್ ಲೈಬ್ರರಿಯ ಸದಸ್ಯರಾಗಿ ಅಂಗೈಯಲ್ಲಿಯೇ ಓದುವ ಅವಕಾಶವಿದ್ದು ಎಲ್ಲರೂ ಪ್ರಯೋಜನ ಪಡೆದುಕೊಳ್ಳಬೇಕೆಂದರು.ಪತ್ರಕರ್ತ ಜಿ.ಎನ್.ಭಟ್ ಮಾತನಾಡಿ, ಪುಸ್ತಕಗಳನ್ನು ಹಾಗೂ ದಿನಪತ್ರಿಕೆಗಳನ್ನು ನಿತ್ಯ ಓದುವುದರಿಂದ ನಮ್ಮ ಜ್ಞಾನ ವೃದ್ಧಿಸುತ್ತದೆ. ಗ್ರಂಥಾಲಯಗಳು ದೇವಾಲಯಗಳಿದ್ದಂತೆ. ಪ್ರತಿ ದಿನ ಒಂದಷ್ಟು ಸಮಯವನ್ನು ಓದುವುದಕ್ಕಾಗಿ ಮೀಸಲಿಡಬೇಕು ಎಂದರು.ಮಾಜಿ ಗ್ರಂಥಪಾಲಕ ಎನ್.ಎಸ್.ಭಟ್ ಮಾತನಾಡಿದರು.ಪ್ರವೀಣ ಬೆನಕಟ್ಟಿ, ನಳನಿ ಗುಂಡೂಪಕರ್, ರೂಪಾ ಪಾಠಣಕರ, ಗೀತಾ ಬಾಸೂರ,ಸಾವಿತ್ರಿ ಭಟ್ಟ ಮುಂತಾದವರು ಇದ್ದರು ಶ್ರೀಪಾದ ಗಾಂವಕರ ನಿರ್ವಹಿಸಿz.ಗ್ರಂಥಪಾಲಕ ಎಫ್.ಎಚ್.ಬಾಸೂರು ವಂದಿಸಿದರು.
Leave a Comment