ಶಿರಸಿ : ಗಾಂಜಾ ಮಾರಾಟ ಹಾಗೂ ಸೇವನೆ ಆರೋಪದಲ್ಲಿ ಶಿರಸಿಯಲ್ಲಿ 15 ಯುವಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
![ಗಾಂಜಾ ಸೇವನೆ ಆರೋಪ : 15 ಮಂದಿ ಯುವಕರು ಪೊಲೀಸರ ವಶಕ್ಕೆ 1 WhatsApp Image 2021 11 22 at 18.47.50](https://i0.wp.com/canarabuzz.com/wp-content/uploads/2021/11/WhatsApp-Image-2021-11-22-at-18.47.50.jpeg?resize=338%2C254&ssl=1)
ಡಿವೈಎಸ್ಪಿ ರವಿ ಡಿ.ನಾಯ್ಕ, ಸಿಪಿಐ ರಾಮಚಂದ್ರ ನಾಯಕ ಅವರ ಮಾರ್ಗದರ್ಶನದಲ್ಲಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯ ಪಿಎಸ್ಐ ಭೀಮಾಶಂಕರ್ ಹಾಗೂ ಸಿಬ್ಬಂದಿ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ 15 ಯುವಕರನ್ನು ವಶಕ್ಕೆ ಪಡೆಯಲಾಗಿದೆ.
![ಗಾಂಜಾ ಸೇವನೆ ಆರೋಪ : 15 ಮಂದಿ ಯುವಕರು ಪೊಲೀಸರ ವಶಕ್ಕೆ 2 WhatsApp Image 2021 11 22 at 18.47.51](https://i0.wp.com/canarabuzz.com/wp-content/uploads/2021/11/WhatsApp-Image-2021-11-22-at-18.47.51.jpeg?resize=403%2C301&ssl=1)
ಕಸ್ತೂರಬಾ ನಗರ. ನೆಹರೂ ನಗರ ಸೇರಿದಂತೆ ವಿವಿಧೆಡೆಯಿಂದ ಯುವಕರನ್ನು ಗಾಂಜಾ ಸೇವನೆ ಹಾಗೂ ಮಾರಾಟದ ಆರೋಪದ ಮೇರೆಗೆ ವಶಕ್ಕೆ ಪಡೆದು, ಮುಂದಿನ ಕಾನೂನು ಪ್ರಕ್ರಿಯೆಗಾಗಿ ವೈದ್ಯಕೀಯ ಪರೀಕ್ಷೆಗೆ ಉಡುಪಿಯ ಮಣಿಪಾಲ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ. ವೈದ್ಯಕೀಯ ವರದಿ ಬಂದ ಬಳಿಕ ಮುಂದಿನ ಕ್ರಮ ಜರುಗಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
Leave a Comment