ಮುಂಡಗೋಡ : ಅಪ್ರಾಪ್ತೆಯ ಮೇಲೆ ಅತ್ಯಾಚಾರ ನಡೆಸಿರುವ ಆರೋಪದ ಮೇರೆಗೆ ಪಾಳಾ ಗ್ರಾಮದ ದೇವರಾಜ ಶಿವಪೂರ ಎನ್ನುವವನ ಮೇಲೆ ಪೊಲೀಸ್ ದೂರು ದಾಖಲಾಗಿದೆ.
ಆ.23 ರಂದು ತನ್ನೂರಿನಿಂದ ಬೈಕ್ ಮೇಲೆ ಅಪ್ರಾಪ್ತೆಯನ್ನು ಚಂದ್ರಗುತ್ತಿಗೆ ಕರೆದುಕೊಂಡು ಹೋಗಿ ಮರಳಿ ಊರಿಗೆ ಬರುತ್ತಿದ್ದಾಗ ಮಾರ್ಗ ಮಧ್ಯದ ಬನವಾಸಿ ಕಾಡಿನ ಪ್ರದೇಶದಲ್ಲಿ ಅಪ್ರಾಪ್ತೆಯ ಮೇಲೆ ಈತ ಅತ್ಯಾಚಾರ ನಡೆಸಿದ್ದಾನೆ.
ನಡೆದ ಘಟನೆ ಯಾರಿಗಾದರೂ ಹೇಳಿದರೆ ನಿನ್ನನ್ನು ಹಾಗೂ ನಿನ್ನ ತಮ್ಮನನ್ನು ಕೊಲ್ಲುವುದಾಗಿ ಅಪ್ರಾಪ್ತೆಯ ಬೆದರಿದ್ದ ಎಂದು ಅಪ್ರಾಪ್ತೆಯ ತಾಯಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
Leave a Comment