ಸಿದ್ಧಾಪುರ : ತಾಲೂಕಿನ ನಾಣೀಕಟ್ಟಾ ಸಮೀಪದ ಸುರಗಿಕೊಪ್ಪದಂತ ಪುಟ್ಟ ಗ್ರಾಮದ ಮಂಜುನಾಥ ಹೆಗಡೆ ಕರ್ನಲ್ ಹುದ್ದೆಗೆ ಏರಿ 5 ಮಹಾರಾಷ್ಟ ಎನ್ ಸಿಸಿ ಬಟಾಲಿಯನ್ನಲ್ಲಿ ಕಮಾಂಡಿAಗ್ ಅಧಿಕಾರಿಯಾಗಿ ನಿಯುಕ್ತಿಗೊಂಡಿದ್ದಾರೆ.
ಮAಜುನಾಥ ಹೆಗಡೆ 1983ರಲ್ಲಿ ಭಾರತೀಯ ಭೂಸೇನೆಗೆ ಸೇರಿದ್ದರು. 2001 ರಲ್ಲಿ ಕಮಿಷನ್ಸ್ ಅಧಿಕಾರಿಯಾಗಿ ಪದೋನ್ನತಿ ಹೊಂದಿದ್ದರು. ನಂತರ ಲೆಫ್ಟಿನೆಂಟ್, ಕ್ಯಾಪ್ಟನ್, ಮೇಜರ್, ಲೆಫ್ಟಿನೆಂಟ್, ಕರ್ನಲ್ ಆಗಿ ದಕ್ಷ ಸೇವೆ ಸಲ್ಲಿಸಿದ್ದಾರೆ.
ಇವರ ಸೇವೆಯನ್ನು ಪರಿಗಣಿಸಿ ಅಖಿಲ ಹವ್ಯಕ ಮಹಾಸಭಾದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಗೌರವಿಸಲಾಗಿದೆ. ಜಿಲ್ಲೆಯಲ್ಲಿ ಕರ್ನಲ್ ಹುದ್ದೆಗೆ ಏರಿದ ಕೆಲವೇ ಕೆಲವರಲ್ಲಿ ಇವರು ಒಬ್ಬರಾಗಿದ್ದಾರೆ ಎನ್ನುವುದು ಅಭಿಮಾನದ ಸಂಗತಿಯಾಗಿದೆ.
Leave a Comment