ಉತ್ತರ ಕನ್ನಡ ಜಿಲ್ಲೆಯಲ್ಲಿ ಗ್ರಾಮೀಣ ರಸ್ತೆಗಳು ಮತ್ತು ಸೇತುವೆಗಳ ಅಭಿವೃದ್ದಿಗಾಗಿ ಬಂದ ಕಾಮಗಾರಿಗಳನ್ನು ಕೆ.ಆರ್.ಐ.ಡಿ.ಎಲ್. ಸಂಸ್ಥೆಗೆ ನೀಡಲು ಕಾರವಾರ ತಾಲೂಕಾ ನೋಂದಾಯಿತ ಸಿವಿಲ್ ಗುತ್ತಿಗೆದಾರರ ಸಂಘದ ವತಿಯಿಂದ ಆಕ್ಷೇಪಣೆ ವ್ಯಕ್ತಪಡಿಸಿ ಜಿಲ್ಲಾ ಪಂಚಾಯತ್ ಸಿಇಒ ಹಾಗೂ ಜಿಲ್ಲಾಡಳಿತಕ್ಕೆ ಇಂದು ಮನವಿ ಸಲ್ಲಿಸಿದರು.
ಇಡೀ ದೇಶ, ರಾಜ್ಯ, ಜಿಲ್ಲೆ, ತಾಲೂಕುಗಳಲ್ಲಿ ಗುತ್ತಿಗೆದಾರರು ಕೋವಿಡ್-19 ಮಹಾಮಾರಿಯಿಂದ ಕಾಮಗಾರಿ, ಕೆಲಸಗಳು ಇಲ್ಲದೇ ತತ್ತರಿಸಿದೆ. ಹೀಗಿರುವಾಗ ಉತ್ತರ ಕನ್ನಡ ಜಿಲ್ಲೆಗೆ ಯಲ್ಲಾಪುರ ಕ್ಷೇತ್ರ ಹೊರತುಪಡಿಸಿ ಬಾಕಿ ಐದು ಕ್ಷೇತ್ರಗಳಿಗೆ ಒಟ್ಟೂ 70 ಕೋಟಿ ರೂ. ಬಿಡುಗಡೆಯಾಗಿದ್ದು ಕಾರವಾರ-ಅಂಕೋಲಾ ಕ್ಷೇತ್ರಕ್ಕೆ 16 ಕೋಟಿ ರೂ. ಬಿಡುಗಡೆಯಾಗಿದೆ.
ಕಾರವಾರ ಅಂಕೋಲಾ ವಿಧಾನ ಸಭಾ ಕ್ಷೇತ್ರದ ಗ್ರಾಮೀಣ ರಸ್ತೆ ಮತ್ತು ಸೇತುವೆಗಳ ಅಭಿವೃದ್ದಿ ಕಾಮಗಾರಿಗಳನ್ನು ಅನುಷ್ಠಾನ ಮಾಡಲು ಕೆ.ಆರ್.ಐ.ಡಿ.ಎಲ್. ಸಂಸ್ಥೆಗೆ ನೀಡಲು ಕೋರಿ ಈ ಕ್ಷೇತ್ರದ ಶಾಸಕಿ ರೂಪಾಲಿ ನಾಯ್ಕ ಅವರು ತಮ್ಮ ಅಧಿಕೃತ ಪತ್ರದ ಮುಖಾಂತರ ದಿನಾಂಕ: 30-08-2021 ರಂದು ಕಾರವಾರ-ಅಂಕೋಲಾ ತಾಲೂಕಿನ ಒಟ್ಟೂ 114 ವಿವಿಧ ಕಾಮಗಾರಿಗಳನ್ನು ಉಲ್ಲೇಖಿಸಿ ಒಟ್ಟೂ ಹದಿನಾರು ಕೋಟಿ ರೂ. ಕಾಮಗಾರಿ ನೀಡಲು ಕೋರಿದ್ದಾರೆ.
Leave a Comment