ಕಾರವಾರಹೊನ್ನಾವರ ತಾಲ್ಲೂಕಿನ ಮಂಕಿಯಲ್ಲಿ ಹೊಸದಾಗಿ ನಿರ್ಮಾಣವಾಗಲಿರುವ ಬಸ್ಸ್ಟ್ಯಾಂಡನ್ನು ಪಟ್ಟಣದ ಕೇಂದ್ರ ಭಾಗದಲ್ಲಿ ನಿರ್ಮಿಸುವ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸುವಂತೆ ಒತ್ತಾಯಿಸಿ ಮಂಕಿ ಭಾಗದ ಗುಳದಕೇರಿಯ ಸ್ಥಳೀಯರು ಅಪರ ಜಿಲ್ಲಾಧಿಕಾರಿ ಎಚ್.ಕೆ. ಕೃಷ್ಣಮೂರ್ತಿ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.

ಹೊನ್ನಾವರ ತಾಲ್ಲೂಕಿನ ಮಂಕಿಯನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸಲಾಗಿದೆ. ಹೀಗಾಗಿ ಕೆಲವೊಂದು ಮೂಲಭೂತ ಸೌಲಭ್ಯಗಳನ್ನು ಮೇಲ್ದರ್ಜೆಗೇರಿಸುವ ಹಾಗೂ ಹೊಸ ಕಟ್ಟಡ ನಿರ್ಮಾಣವಾಗುವ ಪ್ರಕ್ರಿಯೆ ಚಾಲನೆಯಲ್ಲಿದ್ದು, ಅದರಲ್ಲಿ ಬಸ್ ನಿಲ್ದಾಣ ಕೂಡ ನಿರ್ಮಾಣ ಹಂತದಲ್ಲಿದೆ. ಆದರೆ ಈ ಬಸ್ ನಿಲ್ದಾಣವನ್ನು ಪಟ್ಟಣ ಪಂಚಾಯತ ಕೇಂದ್ರ ಭಾಗದಲ್ಲಿ ನಿರ್ಮಾಣ ಮಾಡಲು ಸಂಬಂಧಪಟ್ಟವರಿಗೆ ಶಿಫಾರಸ್ಸು ಮಾಡಬೇಕಾಗಿದೆ. ಸರ್ವೇ ನಂ. 469 ರಲ್ಲಿ ಸರಕಾರಿ ಜಾಗದ ಲಭ್ಯತೆ ಇದ್ದು, ಎಲ್ಲ ಉದ್ದೇಶದಿಂದಲೂ ಅನೂಕೂಲಕರವಾಗಲಿದೆ.
ಈ ಜಾಗದಿಂದ ಸರಕಾರಿ ಆಸ್ಪತ್ರೆ 10 ಮೀ, ಸರಕಾರಿ ಶಾಲೆ 300 ಮೀ., ಪಟ್ಟಣ ಪಂಚಾಯತ ಕಾರ್ಯಾಲಯ 200 ಮೀ ವ್ಯಾಪ್ತಿಯಲ್ಲಿರುತ್ತದೆ. ಆದ್ದರಿಂದ ಬೇಡಿಕೆಯನ್ನು ಪರಿಗಣಿಸಿ ಸಂಬಂಧಪಟ್ಟವರಿಗೆ ಕ್ರಮವಹಿಸಲು ಶಿಫಾರಸ್ಸು ಮಾಡುವಂತೆ ಒತ್ತಾಯಿಸಿದ್ದಾರೆ.
ಇನ್ನು ಮಂಕಿ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಜನರಿಗೆ ಈ ಆಸ್ಪತ್ರೆಯನ್ನು ಹೊರತುಪಡಿಸಿದರೆ ಬೇರೆ ಸರಕಾರಿ ಆಸ್ಪತ್ರೆಯ ಲಭ್ಯತೆ ಇಲ್ಲ. ತಾಲೂಕು ಆಸ್ಪತ್ರೆ ಸಹ ದೂರದಲ್ಲಿದ್ದು ಈ ಆಸ್ಪತ್ರೆಯನ್ನೇ ಮೇಲ್ದರ್ಜೆಗೇರಿಸಿ ಅಗತ್ಯ ಸೇವೆ ದೋರಕುವಂತೆ ಮಾಡಿಕೊಡುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.
Leave a Comment