
ಯಲ್ಲಾಪುರ: ವಿಧಾನ ಪರಿಷತ್ ಚುನಾವಣೆ ಪೂರ್ವದಲ್ಲಿ ಜಿ.ಪಂ- ತಾ.ಪಂ ಚುನಾವಣೆ ನಡೆಸದೇ ಇರುವುದರಿಂದ ಈ ಎರಡು ಹಂತದ ಪ್ರತಿನಿಧಿಗಳ ಮತದಾನದ ಹಕ್ಕನ್ನು ಬಿಜೆಪಿ ಕಸಿದುಕೊಂಡಿದೆ ಎಂದು ವಿಧಾನ ಪರಿಷತ್ ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ ಆರೋಪ ಮಾಡಿದರು.
ಅವರು ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಯಲ್ಲಾಪುರ ತಾಲೂಕಾ ವ್ಯಾಪ್ತಿಯ ಪಕ್ಷದ ಜನಪ್ರತಿನಿಧಿಗಳ ಸಭೆಯಲ್ಲಿ ಮಾತನಾಡಿ ನಾನು ಅಧಿಕಾರದ ಲಾಲಸೆಯಿಂದ ರಾಜಕೀಯದಲ್ಲಿಲ್ಲ. ಜನರಿಗೆ ಉತ್ತಮ ಆಡಳಿತ ಸೇವೆ ನೀಡುವ ಸದುದ್ದೇಶ ನನ್ನದಾಗಿದೆ. ಪಂಚಾಯತ್ ವ್ಯವಸ್ಥೆಯನ್ನು ಹದಗೆಡಿಸಿದ್ದೇ ಬಿಜೆಪಿ ಸರಕಾರ, ಅನುದಾನವನ್ನೇ ನೀಡದೇ ಇಡೀ ವ್ಯವಸ್ಥೆಯನ್ನೇ ಅರೆಜೀವ ವನ್ನಾಗಿಸಿದೆ , ಬಿಜೆಪಿ ಆಡಳಿತ ವೈಫಲ್ಯ, ಬೆಲೆ ಏರಿಕೆಯಿಂದ ಬೇಸತ್ತ ಜಿಲ್ಲೆಯ ಮತದಾರರು ಈ ಬಾರಿಯೂ ನಮ್ಮಕೈ ಹಿಡಿಯಲಿದ್ದಾರೆ ಎಂದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಎನ್. ಗಾಂವಕರ ಮಾತನಾಡಿ, ಕಾರ್ಯಕರ್ತರು ಪ್ರತಿ ಗ್ರಾಮಗಳಿಗೆ ಹೋಗಿ ಚುನಾವಣೆಯ ಪ್ರಕ್ರಿಯೆ ಕುರಿತು ಮಾಹಿತಿ ನೀಡಿ ಪ್ರಥಮ ಪ್ರಾಶಸ್ತ್ರ ಮತವನ್ನು ಕಾಂಗ್ರೆಸ್ಸಿಗೆ ನೀಡುವಂತೆಮಾನವರಿಕೆ ಮಾಡಿಕೊಡಬೇಕು ಎಂದರು. ಜಿಲ್ಲಾ ವಕ್ತಾರವಾದ ಗಾಯತ್ರಿ ನೇತ್ರಕರ, ಆರ್ ಪಿ ನಾಯ್ಕ, ಪ್ರಮುಖರಾದ ಉಲ್ಲಾಸ ಶಾನಭಾಗ ಟಿ,ಸಿ ಗಾಂವಕರ, ಸೂರ್ಯ ನಾರಾಯಣ ಮಾಳಕೊಪ್ಪ,ರವಿಚಂದ್ರ ನಾಯ್ಕ ಮಾತನಾಡಿದರು.
ಪ್ರಮುಖರಾದ ದೀಪಕ ದೊಡ್ಡುರು, ಶ್ರೀಪಾದ ಹೆಗಡೆ ಕಳವೆ, ಲಾರೆನ್ಸ್ ಸಿದ್ದಿ ಪಪಂ ಸದಸ್ಯರಾದ ನರ್ಮದಾ ನಾಯ್ಕ, ಸಯ್ಯದ ಕೈಸರ್ ಅಲಿ,ಅನಿಲ ಮರಾಠಿ ನಿರ್ವಹಿಸಿದರು. ಯುವ ಮುಖಂಡ ಪ್ರಶಾಂತ ಸಭಾಹಿತ ಸ್ವಾಗತಿಸಿದರು. ಅಣ್ಣಾಪ್ಪಾ ವಂದಿಸಿದರು
Leave a Comment