ಭಟ್ಕಳ: ಅಂಬುಲೆನ್ಸ ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಸರ್ಪನಕಟ್ಟೆ ಬಳಿ ನಡೆದಿದೆ.
ಘಟನೆಯಲ್ಲಿ ಕೋಣಾರ ಬೇಸೆಯ ನಿವಾಸಿ ರಮೇಶ ಜೋಗಿ ಗೊಂಡ (41) ಸಾವನ್ನಪ್ಪಿದ್ದಾನೆ. ಬೈಕಿನಲ್ಲಿದ್ದ ಇನ್ನೋರ್ವ ನಾಗಪ್ಪ ನಾರಾಯಣ ನಾಯ್ಕ ಅಪಾಯದಿಂದ ಪಾರಾಗಿದ್ದಾರೆನ್ನಲಾಗಿದೆ.
ಕಾರವಾರ ಕಡೆಯಿಂದ ಮಂಗಳೂರು ಕಡೆಗೆ ರೋಗಿಯೋರ್ವರನ್ನು ಕರೆದುಕೊಂಡು ಹೋಗುತ್ತಿದ್ದ ಅಂಬುಲೆನ್ಸ್ ಹಾಗೂ ಬೆಣಂದೂರು ರಸ್ತೆಯಿಂದ ಸರ್ಪನಕಟೆಯ ಕಡೆಗೆ ಬರುತ್ತಿದ್ದ ಬೈಕ್ ಸವಾರನ ನಡುವೆ ಅಪಘಾತ ಸಂಭವಿಸಿತ್ತು ಎನ್ನಲಾಗಿದೆ.
ಅಂಬುಲೆನ್ಸ್ನಲ್ಲಿದ್ದ ರೋಗಿಯನ್ನು ನಂತರ ಬೇರೊಂದು ಅಂಬುಲೆನ್ಸ್ನಲ್ಲಿ ಕಳುಹಿಸಲಾಯಿತು ಎಂದು ತಿಳಿದು ಬಂದಿದೆ.
ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Leave a Comment