ಯಲ್ಲಾಪುರ: ವಿಶ್ವದರ್ಶನ ಶಿಕ್ಷಣ ಸಂಸ್ಥೆಯೂ ವಿವಿಧ ಗ್ರಾಮೀಣ ಪ್ರದೇಶಗಳ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬಸ್ ಸಂಚಾರ ಶುರು ಮಾಡಿದೆ.
ಗುಳ್ಳಾಪುರ, ರಾಮನಗುಳಿ, ಕೊಡ್ಲಗದ್ದೆ, ಅರಬೈಲ್, ಇಡಗುಂದಿ ಮಾರ್ಗವಾಗಿ ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಬಸ್ ಓಡಾಟ ನಡೆಸುತ್ತಿದೆ. ಗ್ರಾಮ ಕ್ಕೆ ಆಗಮಿಸಿದ ಬಸ್ ಅನ್ನು ಗ್ರಾಮದ ಜನ ಪೂಜೆ ಮಾಡಿ ಬರಮಾಡಿಕೊಂಡರು.
ಈ ವೇಳೆ ಪಾಲಕರಾದ ಸುಧಾಕರ ಭಟ್ಟ ಹೆಗ್ಗಾರ್ ಮಾತನಾಡಿ, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ದೊರೆಯುವಂತೆ ಮಾಡಲು ವಿಶ್ವದರ್ಶನ ಶಿಕ್ಷಣ ಸಂಸ್ಥೆ ಕಾಳಜಿ ವಹಿಸಿದೆ. ಪ್ರಸ್ತುತ ವಿಶೇಷ ಬಸ್ ಓಡಾಟ ನಡೆಸಿರುವುದರಿಂದ ಮಕ್ಕಳಿಗೆ ಅನುಕೂಲವಾಗಿದೆ ಎಂದು ಹೇಳಿದರು. ಇದಕ್ಕೂ ಮುನ್ನ ಗ್ರಾಮದೇವಿ ದೇವಸ್ಥಾನದಲ್ಲಿ ಸಂಸ್ಥೆಯ ಕಾರ್ಯದರ್ಶಿ ನರಸಿಂಹ ಕೋಣೆಮನೆ ಅವರು ಬಸ್ ಗೆ ಪೂಜೆ ಸಲ್ಲಿಸಿದರು.
Leave a Comment