ಯಲ್ಲಾಪುರ :ಕನ್ನಡವನ್ನು ರಾಜಕೀಯ ಅಡಿಯಾಳನ್ನಾಗಿಸದೇ, ಕನ್ನಡಕ್ಕಾಗಿ ಹೋರಾಡುವ ಮೂಲಕ ಕನ್ನಡ ಕಟ್ಟುವ ಕಾರ್ಯ ಮಾಡೋಣ ಎಂದು ಕನ್ನಡ ಸಾಹಿತ್ಯ ಪರಿಷತ್ ನೂತನ ಜಿಲ್ಲಾಧ್ಯಕ್ಷ ಬಿ.ಎನ್.ವಾಸರೆ ಹೇಳಿದರು.

ಪಟ್ಟಣದ ಸಾಹಿತ್ಯ ಭವನದಲ್ಲಿ ತಾಲೂಕು ಅಧ್ಯಕ್ಷ ಸ್ಥಾನಕ್ಕೆ ಸಮಾಲೋಚನೆ ನಡೆಸಿ, ಸನ್ಮಾನ ಸ್ವೀಕರಿಸಿ ಮಾತನಾಡಿ.ಶಾಲೆಗಳಲ್ಲಿ ಸಾಹಿತ್ಯದ ಅಭಿರುಚಿ ಕಡಿಮೆ ಆಗುತ್ತಿದೆ. ಮುಂದಿನ ದಿನಗಳಲ್ಲಿ ಸಾಹಿತ್ಯಾಭಿರುಚಿ ಹೆಚ್ಚಿಸುವ, ಸಾಹಿತ್ಯ ಕೃತಿಗಳನ್ನ ರಚಿಸಿದವರಿಗೆ ಪ್ರೋತ್ಸಾಹ ನೀಡುವ ಕಾರ್ಯ ಮಾಡಲಾಗುವುದು ಹಾಗೂ ಪುಸ್ತಕ ಜೋಳಿಗೆ ಕಾರ್ಯವನ್ನು ಪ್ರಾರಂಭಿಸಲಾಗುವುದು. ಡಿಸಂಬರ್ 23 ರಂದು ದಾಂಡೇಲಿಯಲ್ಲಿ ರಾಜ್ಯಾಧ್ಯಕ್ಷ ಡಾ. ಮಹೇಶ ಜೋಶಿ ಅವರ ಉಪಸ್ಥಿತಿಯಲ್ಲಿ ಹೊಣೆಗಾರಿಕೆ ಸ್ವೀಕಾರ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.ಎಂದರು ಇದೆ ಸಂದರ್ಭದಲ್ಲಿ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್, ಸರ್ಕಾರಿ ನೌಕರರ ಸಂಘ, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ, ವಿವಿಧ ಸಂಘಟನೆಯವರು ಜಿಲ್ಲಾಧ್ಯಕ್ಷರನ್ನು ಸನ್ಮಾನಿಸಿದರು. ಅಧ್ಯಕ್ಷ ಸ್ಥಾನಕ್ಕೆ ಎಂ.ಆರ್.ಹೆಗಡೆಕುಂಬಿಗುಡ್ಡೆ, ಶಿವಲೀಲಾ ಹುಣಸಗಿ, ಸುಬ್ರಹ್ಮಣ್ಯ ಭಟ್ಟ ವೇಣುಗೋಪಾಲ ಮದ್ಗುಣಿ ಹಾಗೂ ಸಣ್ಣಪ್ಪಭಾಗ ಅವರ ಹೆಸರನ್ನು ಸಭೆಯಲ್ಲಿದ್ದ ಸದಸ್ಯರು ಸೂಚಿಸಿದರು.
ಸಭೆಯಲ್ಲಿ ವೈಟಿಎಸ್.ಎಸ್. ನಿವೃತ್ತ ಪ್ರಾಂಶುಪಾಲರುಗಳಾದ ಶ್ರೀರಂಗ ಕಟ್ಟಿ,ಬೀರಣ್ಣ ನಾಯಕ ಮೊಗಟ, ಜಯರಾಮ ಗುನಗ, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸುಭಾಶ್ ನಾಯಕ, ದಾಂಡೇಲಿ ಬಿಎನ್ ಜಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಯು.ಎಸ್. ಪಾಟೀಲ್, ಜಿಲ್ಲಾ ಪ್ರಾಥಮಿಕ ಶಿಕ್ಷಕರ ಸಂಘದಅಧ್ಯಕ್ಷ ನಾರಾಯಣ ನಾಯಕ, ನಾಗರಿಕ ವೇದಿಕೆಯ ಅಧ್ಯಕ್ಷರಾಮು ನಾಯ್ಕ ಮುಂತಾದವರು ಇದ್ದರು. ನಿಕಟ ಪೂರ್ವ ತಾಲೂಕು ಘಟಕದ ಅಧ್ಯಕ್ಷ ವೇಣುಗೋಪಾಲ ಮದ್ಗುಣಿ ಸ್ವಾಗತಿಸಿದರು. ಕೇಬಲ್ ನಾಗೇಶ ನಿರ್ವಹಿಸಿದರು. ಉಲ್ಲಾಸ ಶಾನಭಾಗ ವಂದಿಸಿದರು.
Leave a Comment