ಅಂಕೋಲಾ : ತಾಲೂಕಿನ ಮಾಸ್ತಿಕಟ್ಟಾ ಸಮೀಪ ಹೆದ್ದಾರಿಯಲ್ಲಿ ಬುಧವಾರ ರಾತ್ರಿ ಕಾರ್ ಅಡ್ಡಹಾಕಿ ಹಲ್ಲೆ ನಡೆಸಿ ಲಕ್ಷಾಂತರ ರೂ. ಕಸಿದುಕೊಂಡು ಪರಾರಿಯಾದ ಪ್ರಕರಣಕ್ಕೆ ಸಂಬAಧಸಿ ತ್ವರಿತ ತನಿಖೆಗಿಳಿದ ಪೊಲೀಸರು ಶುಕ್ರವಾರ ಒಬ್ಬ ಬಾಲಾಪರಾಧಿ ಸೇರಿದಂತೆ ಮೂವರನ್ನು ಹುಬ್ಬಳ್ಳಿಯಲ್ಲಿ ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಬೆಳವಣಿಗೆ ಕಂಡಿದೆ.
ಹುಬ್ಬಳ್ಳಿ ಗೋಪನಕೊಪ್ಪದ ಶಿವಪಾರ್ವತಿ ಗುಡಿ ಹತ್ತಿರ ನಿವಾಸಿ ಸುಲಿಗೆಗೆ ಒಳಗಾದವರ ಕಾರು ಚಾಲಕ ಉಮೇಶ ಭೀಮಪ್ಪ ಬಂಕಾಪುರ (21) ಹುಬ್ಬಳ್ಳಿಯ ತಾರಿಹಾಳ ರಾಮನಗರದ ರೋಹಿತ್ ಪರಶುರಾಮ ವಡ್ಡರ್ (21) ಬಂಧಿತ ಆರೋಪಿಗಳಾಗಿದ್ದಾರೆ.
ಇವರಿಂದ 4 ಲಕ್ಷ 47 ಸಾವಿರ ರೂ. ನಗದು, ರೆಡ್ ಮಿ ನೋಟ್ 7 ಮೊಬೈಲ್, ವಿವಿಧ ಬ್ಯಾಂಕ್ ನ 9 ಚೆಕ್ಗಳು ಮತ್ತು ಕೃತ್ಯಕ್ಕೆ ಬಳಸಿದ ಬೈಕ್ ಸೇರಿದಂತೆ ಇನ್ನಿತರ ಸ್ವತ್ತು ಗಳನ್ನು ವಶಕ್ಕೆ ಪಡೆದಿದ್ದಾರೆ. ಪಿಐ ಸಂತೋಷಕುಮಾರ ಶೆಟ್ಟಿ, ಪ್ರೊ.ಪಿಎಸ್.ಐ ಮುಶಾಹಿದ್ ಅಹ್ಮದ್ ಸಿಬ್ಬಂದಿಗಳಾದ ಪರಮೇಶ ಎಸ್. ಆಸಿಫ್ ಆರ್.ಕೆ ಮಂಜುನಾಥ ಲಕ್ಮಾಪುರ, ಸುರೇಶ ಬೆಳ್ಳೊಳ್ಳಿ ಗುರುರಾಜ ಜಿ.ನಾಯ್ಕ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
Leave a Comment