ತಿರುವನಂತಪುರA : ಖ್ಯಾತ ಅಥ್ಲಿಟ್ ಪಿ.ಟಿ ಉಷಾ ಅವರ ವಿರುದ್ಧ ಕೇರಳ ಪೊಲೀಸರು ವಂಚನೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಾಜಿ ಅಥ್ಲಿಟ್ ಜೆಮ್ಮಾ ಜೋಸೆಫ್ ಅವರು ಪಿ.ಟಿ ಉಷಾ ವಿರುದ್ಧ ಕೋಝಿಕೋಡ್ ನ ವೆಲ್ಲಾಯಿಲ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ಹಿನ್ನಲೆಯಲ್ಲಿ ಉಷಾ ಸೇರಿದಂತೆ 6 ಜನರ ವಿರುದ್ಧ ಐಪಿಸಿ ಸೆಕ್ಷನ್ 420 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಜೆಮ್ಮಾ ಜೋಸೆಫ್ ಅವರು ತಾನು ಉಷಾ ಅವರ ಗ್ಯಾರೆಂಟಿ ಮೇಲೆ ಬಿಲ್ಡರ್ ನಿಂದ 1,012 ಚದರ ಅಡಿ ಫ್ಲಾಟ್ ಖರೀದಿಸಿದ್ದರು. ಇದಕ್ಕಾಗಿ ಇನ್ಪಲ್ ಮೆಂಟ್ ಗಳಲ್ಲಿ 46 ಲಕ್ಷ ರೂ. ಪಾವತಿಸಿದ್ದರು. ಆದರೆ ಗಡವು ಮುಗಿದಿದ್ದರೂ ಬಿಲ್ಟರ್ ಫ್ಲಾಟ್ ಹಸ್ತಾಂತರಿಸಿಲ್ಲ. ಈ ಹಿನ್ನಲೆಯಲ್ಲಿ ಉಷಾ ಬಿಲ್ಡರ್ ಜೊತೆ ಸೇರಿ ತನಗೆ ಮೋಸ ಮಾಡಿದ್ದಾರೆ ಎಂದು ದೂರು ನೀಡಿದ್ದಾರೆ.
ಕೇರಳ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದ ಮೊರೆ ಹೋಗಿ ಸಮಸ್ಯೆ ಬಗೆಹರಿಸಲು ಮುಂದಾಗಿದ್ದೆ, ಆದರೆ ಬಿಲ್ಡರ್ ಮತ್ತು ಉಷಾ ಹಣ ಮರುಪಾವತಿ ಮಾಡಲು ಒಪ್ಪಿರಲಿಲ್ಲ ಎಂದು ಜೆಮ್ಮಾ ಜೋಸೆಫ್ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ ಈ ಹಿನ್ನಲೆಯಲ್ಲಿ ಉಷಾ ಮತ್ತು ಇತರ ಆರು ಮಂದಿ ವಿರುದ್ಧ ಐಪಿಸಿ 420 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
Leave a Comment