ಬೆಂಗಳೂರು : ರಾಜ್ಯದ ಸರ್ಕಾರಿ ಫ್ರೌಡಶಾಲಾ ಮುಖ್ಯ ಶಿಕ್ಷಕರು ಹಾಗೂ ತತ್ಸಮಾನ ಗ್ರೂಪ್-ಬಿವೃಂದದ ಅಂತರ ವಿಭಾಗದ ಕೋರಿಕೆ ವರ್ಗಾವಣೆ ಡಿಸೆಂಬರ್ 24 ರಿಂದ ಆರಂಭಗೊಳ್ಳಿಲಿದ್ದ ವರ್ಗಾವಣೆಯ ಕೌನ್ಸಿಲಿಂಗ್‌ಗಾಗಿ ಜಿಲ್ಲಾ ಕೇಂದ್ರಗಳಲ್ಲಿಯೇ ಕೌನ್ಸಿಲಿಂಗ್ ಗೆ ಹಾಜರಾಗಲು ಅವಕಾಶ ನೀಡಿದೆ.
ಈ ಸಂಬAಧ ಸಾರ್ವಜನಿಕ ಶಿಕ್ಷಣ ಇಲಾಖೆಯ ಜಂಟಿ ನಿದೇಶಶಕರು ಮಾಹಿತಿ ನೀಡಿದ್ದು, ಡಿ 24 ರಿಂದ ಸರ್ಕಾರಿ ಪ್ರೌಢ ಶಾಲಾ ಮುಖ್ಯ ಶಿಕ್ಷಕರು ಹಾಗೂ ತತ್ಸಮಾನ ಗ್ರೂಪ್-ಬಿ ವೃಂದದ ಅಂತರ ವಿಭಾಗದ ಕೋರಿಕೆ ವರ್ಗಾವಣೆಗೆ ಕೌನ್ಸಿಲಿಂಗ್ ಆರಂಭಗೊಳ್ಳಲಾಗುತ್ತಿದೆ.
ಕೌನ್ಸಿಲಿಂಗ್ ಕೇಂದ್ರೀಕೃತ ಮಾದರಿಯಲ್ಲಿ ಒಂದೇ ಸ್ಥಳದಲ್ಲಿ ಹಮ್ಮಿಕೊಳ್ಳುವ ಒದಲಿಗೆ ಆಯಾ ಜಿಲ್ಲೆಗೆ ಸಂಬAಧಪಟ್ಟ ಅಭ್ಯರ್ಥಿಗಳು ಅದೇ ಜಿಲ್ಲೆಯ ಉಪ ನಿರ್ದೇಶಕರ ಕಚೇರಿಯಲ್ಲಿ ಹಾಜರಾಗಲು ಅನುವು ಮಾಡಿಕೊಡಲಾಗಿದೆ.
ಈ ಹಿನ್ನಲೆಯಲ್ಲಿ ಅಭ್ಯರ್ಥಿಗಳು ಆಯಾ ಜಿಲ್ಲೆಯ ಉಪ ನಿರ್ದೇಶಕರ ಕಚೇರಿಯಲ್ಲಿಯೇ ಕೌನ್ಸಿಲಿಂಗ್ ಪ್ರಕ್ರಿಯೆಯಲ್ಲಿ ಹಾಜರಾಗಿ, ಜೂಮ್ ಮೀಟ್ ಮಾದರಿಯಲ್ಲಿ ಪಾಲ್ಗೊಂಡು, ವಿಭಾಗದ ಯಾವುದೇ ಖಾಲಿ ಹುದ್ದೆಯನ್ನು ನಿಯಮಾನುಸಾರ ಆಯ್ಕೆ ಮಾಡಿಕೊಳ್ಳಬಹುದು. ಆನಿಟ್ಟಿನಲ್ಲಿ ಉಪ ನಿರ್ದೇಶಕರು ಸಮರ್ಪಕವಾಗಿ ಸೂಕ್ತ ವ್ಯವಸ್ಥೆ ಮಾಡಿಕೊಳ್ಳುವಂತೆ ಸೂಚಿಸಿದ್ದಾರೆ.
Leave a Comment