ಬೆಂಗಳೂರು : ಕಳ್ಳಕಾಕರನ್ನು ಬಂಧಿಸಿ ಜೈಲಿಗೆ ಹಾಕಬೇಕಾಗಿದ್ದ ಪೊಲೀಸ್ ಪೇದೆಯೇ ಕಳ್ಳರೊಂದಿಗೆ ಕೈಜೋಡಿಸಿ ಬೈಕ್ಗಳ ಕಳ್ಳತನ ಮಾಡಿಸುತ್ತಿದ್ದ ಆರೋಪದ ಮೇಲೆ ಮೂಖ್ಯ ಪೊಲೀಸ್ ಪೇದೆ ಹಾಗೂ ತಮಿಳನಾಡು ಮೂಲದ ಇಬ್ಬರು ಅಪ್ರಾಪ್ತರನ್ನು ಮಾಗಡಿ ರಸ್ತೆ ಠಾಣಾ ಪೊಲೀಸರು ಬಂಧಿಸಿದ್ದಾರೆ.
ವಿದ್ಯಾರಣ್ಯಪುರ ಠಾಣೆಯ ಹೊನ್ನಪ್ಪ ಮಾಳಗಿ (26), ರಾಜಸ್ಥಾನ ಮೂಲದ ರಮೇಶ (25) ಬಂಧಿತ ಆರೋಪಿಗಳು. ಬಂಧಿತರಿAದ ಬರೋಬ್ಬರಿ 75 ಲಕ್ಷ ರೂ. ಮೌಲ್ಯದ 52 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
ಹೊನ್ನಪ್ಪ ವಿದ್ಯಾರಣ್ಯಪುರ ಠಾಣೆಯಲ್ಲಿ ಕೆಲಸ ಮಾಡುವಾಗ ಮತ್ತೋರ್ವ ಆರೋಪಿ ರಮೇಶ್ ಜೊತೆಗೂಡಿ ಕಳ್ಳತನ ಮಾಡಿದ ಬೈಕ್ ಮಾರಾಟ ಮಾಡಿ ಹಣ ಸಂಪಾದಿಸುತ್ತಿದ್ದರು.
ಇದರಿಂದ ಪ್ರೇರಣೆಗೊಂಡು ಸುಲಭವಾಗಿ ಹೆಚ್ಚು ಹಣ ಸಂಪಾದಿಸಲು ಕಾನ್ಸ್ಟೇಬಲ್ ಅಪ್ರಾಪ್ತರನ್ನು ಒಗ್ಗೂಡಿಸಿಕೊಂಡು ಕಳ್ಳತನ ಮಾಡಿಸಲು ತಂಡ ರಚಿಸಿಕೊಂಡಿದ್ದ. ಅಪ್ರಾಪ್ತರಿಂದ ಬೈಕ್ ಕಳ್ಳತನ ಮಾಡಿಸಿದರೆ ಕಾನೂನು ಪ್ರಕಾರ ಅವರನ್ನು ಬಂಧಿಸಲು ಸಾಧ್ಯವಿಲ್ಲ ಎಂದು ತಿಳಿದು ಹೊನ್ನಪ್ಪ ದುಬಾರಿ ಬೆಲೆಯ ಹಾಗೂ ಹೆಚ್ಚು ಬೇಡಿಕೆಯಿರುವ ಬೈಕ್ಗಳನೇ ಕಳ್ಳತನ ಮಾಡಲು ಪ್ರೇರೆಪಿಸುತ್ತಿದ್ದ. ಈ ಹಿನ್ನಲೆಯಲ್ಲಿ ಅಪ್ರಾಪ್ತರು ಮನೆಗಳ ಮುಂದೆ ನಿಲ್ಲಿಸಿದ್ದ ಬೈಕ್ಗಳನ್ನು ಕಳ್ಳತನ ಮಾಡುತ್ತಿದ್ದರು.
Leave a Comment