ಕುಮಟಾ : ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸಾಗಾಟ ಮಾಡುತ್ತಿರುವ ಹುಬ್ಬಳ್ಳಿ ಮೂಲದ ವ್ಯಕ್ತಿಯೋರ್ವನನ್ನು ಗೋಕರ್ಣ ಪೊಲೀಸರು ಬಂಧಿಸಿದ್ದಾರೆ.
ಹಳೆ ಹುಬ್ಬಳ್ಳಿಯ ಪ್ರಶಾಂತನಗರದ ನಾಗರಾಜ ಮೋತಿಲಾಲ್ ಬದ್ದಿ (49) ಬಂಧಿತ ಆರೋಪಿ. ಈತ ಗೊಕರ್ಣ ಗ್ರಾಮ ಪಂಜಾಯತ ವ್ಯಾಪ್ತಿಯ ಸಾಣಿಕಟ್ಟಾ ಗ್ರಾಮದಲ್ಲಿ ಸಾರ್ವಜನಿಕ ರಸ್ತೆಯಲ್ಲಿ ಸುಮಾರು 40 ಸಾವಿರ ರೂಪಾಯಿ ಮೌಲ್ಯದ ಅಂದಾಜು 2 ಕೆಜಿ. 46 ಗ್ರಾಂ ತೂಕದ ಗಾಂಜಾವನ್ನು ಮಾರಾಟ ಮಾಡುವ ಉದ್ದೇಶದಿಂದ ಸಾಗಾಟ ಮಾಡುತ್ತಿದ್ದಾಗ ದಾಳಿ ನಡೆಸಿದ ಗೋಕರ್ಣ ಪೊಲೀಸರು, ಆರೋಪಿಯನ್ನು ಬಂಧಿಸಿ ಮಾಲು ವಶಕ್ಕೆ ಪಡೆದರು.
ಗೋಕರ್ಣ ಪಿ.ಐ ವಸಂತ್ ಆಚಾರ್ ನೇತೃತ್ವದಲ್ಲಿ ಪಿ.ಎಸ್.ಐಗಳಾದ ನವೀನ ನಾಯ್ಕ, ಸುಧಾ ಅಘನಾಶಿನಿ, ಸಿಬ್ಬಂದಿಗಳಾದ ರಾಜೇಶ ನಾಯ್ಕ, ಸಚಿನ ನಾಯ್ಕ ಕಿರಣ ಬಾಳೂರ, ಶಿವಾನಂದ ಗೌಡ, ನಾಗರಾಜ ಪಟಗಾರ, ಜಿ.ಬಿ ರಾಣೆ, ಜಟ್ಟಪ್ಪ ನಾಯ್ಕ, ಸುಬ್ರಹ್ಮಣ್ಯ ಹರಿಕಂತ್ರ ದಾಳಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
Leave a Comment