ಭಟ್ಕಳ : ಮುಡೇಶ್ವರದಲ್ಲಿ ಪ್ರವಾಸಿಗರ ಬ್ಯಾಗ್, ಪರ್ಸ್ನಲ್ಲಿರುವ ಚಿನ್ನ, ನಗದನ್ನು ಕಳವು ಮಾಡಲು ಓಡಾಡುತ್ತಿದ್ದ ಮಹಿಳೆಯೋರ್ವಳನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ನಡೆದಿದೆ.
ಗದಗ ಜಲ್ಲೆಯ ದಾಕ್ಷಾಯಣಿ ಸಿದ್ಧಾರ್ಥ ಕೊರಾಚಾರ (27)ಪೊಲೀಸರು ವಶಕ್ಕೆ ಪಡೆದ ಮಹಿಳೆ. ಈಕೆ ಮುಡೇಶ್ವರದಲ್ಲಿ ಪ್ರವಾಸಿಗರ ಬ್ಯಾಗ್, ಪರ್ಸ್ ಕಳವು ಮಾಡಲು ಯತ್ನಿಸುತ್ತಿರುವಾಗ ಕಾವಲುಗಾರರ ಕೈಗೆ ಸಿಕ್ಕಿ ಬಿದ್ದಿದ್ದು, ಈಕೆಯ ಜೊತೆಗಿದ್ದ ಕುಷ್ಟಗಿ ಮೂಲದ ರತ್ನಮ್ಮಾ, ನಾಗಮ್ಮಾ ಹಾಗೂ ಇನ್ನಿಬ್ಬರು ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಈ ಕುರಿತು ಮುಡೇಶ್ವರಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.
Leave a Comment