
ಯಲ್ಲಾಪುರ : ಪಟ್ಟಣ ಪಂಚಾಯತಿಯ ಸಾಮಾನ್ಯ ಸಭೆ ಅಧ್ಯಕ್ಷೆ ಸುನಂದಾ ದಾಸ್ ಅಧ್ಯಕ್ಷತೆಯಲ್ಲಿ ಪಟ್ಟಣ ಪಂಚಾಯತಿ ಸಭಾಭವನದಲ್ಲಿ, ನೂತನ ಮುಖ್ಯಾಧಿಕಾರಿ ಸಂಗನಬಸಯ್ಯ ಅವರ ಉಪಸ್ಥಿತಿಯಲ್ಲಿ ನಡೆಯಿತು.ತರಕಾರಿ ಮಾರುಕಟ್ಟೆಯನ್ನು ಸುಸಜ್ಜಿತಗೊಳಿಸಿ ವ್ಯಾಪಾರಿಗಳಿಗೆ ಮಾರಾಟಕ್ಕೆ ಟೆಂಡರ್ ಮೂಲಕ ಅಂಗಡಿಗಳನ್ನು ಆದಷ್ಟು ಬೇಗ ಒದಗಿಸಿ, ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುವುದುನ್ನು ತಡೆಯಬೇಕೆಂದು ಸದಸ್ಯ ರಾಧಾಕೃಷ್ಣ ನಾಯ್ಕ ಸೂಚಿಸಿದರು.
ಪಟ್ಟಣದಲ್ಲಿ ಹೆಚ್ಚುತ್ತಿರುವ ಹಂದಿಗಳನ್ನು ನಿಯಂತ್ರಿಸಲು ಮುಖ್ಯಾಧಿಕಾರಿಗಳ ಸಲಹೆಯಂತೆ ಹಂದಿ ಮಾಲಿಕರಿಗೆ ನೋಟೀಸ್ ನೀಡಿ, ಅದಕ್ಕೆ ಅವರು ಪ್ರತಿಕ್ರಯಿಸದಿದ್ದರೆ, ಪೋಲಿಸರ ಸಹಾಯ ಪಡೆದು ಮಾಲಿಕರನ್ನು ನಿಯಂತ್ರಿಸಿ ಪರ ಊರಿನಿಂದ ಹಂದಿ ಹಿಡಿಯುವವರನ್ನು ಕರೆಯಿಸಿ, ಹಂದಿಗಳನ್ನು ಸ್ಥಳಾಂತರಿಸಲು ಸದಸ್ಯರೆಲ್ಲರು ಒಮ್ಮತ ಸೂಚಿಸಿದರು. ಅಂತಯೇ ಬೀಡಾಡಿ ದನ ಹಾಗೂ ನಾಯಿಗಳ ಕುರಿತಾಗಿಯೂ ಕ್ರಮ ಕೈಗೊಳ್ಳುವಂತೆ ಕೆಲ ಸದಸ್ಯರು ಒತ್ತಾಯಿಸಿದರು. ಇದಕ್ಕೆ ಉತ್ತರಿಸಿದ ಮುಖ್ಯಾಧಿಕಾರಿಗಳು, ಈ ಕುರಿತು ಜಿಲ್ಲಾ ಮಟ್ಟದಲ್ಲಿ ಟೆಂಡರ್ ಕರೆಯಲಾಗಿದ್ದು, ಜಿಲ್ಲೆಯ ಹಲವು ತಾಲೂಕಿನಲ್ಲಿ ನಾಯಿಗಳ ಸಂತಾನಹರಣ ಚಿಕಿತ್ಸೆ ನಡೆಸಲಾಗಿದೆ. ಅಂತಯೇ ಪಟ್ಟಣದಲ್ಲಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಸದಸ್ಯ ರಾಜು ನಾಯ್ಕ ಹಿಂದಿನ ಸಭೆಯ ಠರಾವುಗಳನ್ನು ಬದಲಾಯಿಸಿರುವ ಕುರಿತು ಆಕ್ಷೇಪ ವ್ಯಕ್ತಪಡಿಸಿದರು. ಪಟ್ಟಣದಲ್ಲಿ ಸಿಸಿಟಿವಿ ಅಳವಡಿಕೆಗೆ ಕರೆದ ಟೆಂಡರ್‌ನ್ನು ಸ್ಥಳೀಯರಿಗೆ ನೀಡಬೇಕು, ಸರಿಯಾದ ನಿರ್ವಹಣೆ ಸ್ಥಳೀಯರಿಂದ ಮಾತ್ರ ಸಾಧ್ಯ ಎಂದು ಸದಸ್ಯರಾದ ಸೋಮು ನಾಯ್ಕ ಹಾಗೂ ರಾಜು ನಾಯ್ಕ ಒತ್ತಾಯಿಸಿದರು.

ಆದರೆ ಕಾನೂನಾತ್ಮಕವಾಗಿ ಟೆಂಡರ್ ಪ್ರಕ್ರಿಯೆಯಲ್ಲಿ ಆಯ್ಕೆಗೊಂಡವರಿಗೆ ಮಾತ್ರ ನೀಡಲು ಸಾಧ್ಯ ಎಂದು ಮುಖ್ಯಾಧಿಕಾರಿಗಳು ತಿಳಿಸಿದರು. ಆದರೆ ಹಿಂದೆಲ್ಲ ಆದ ಬದಲಾವಣೆಗಳ ಕುರಿತು ಬಹಳ ಸಮಯಗಳ ಕಾಲ ಚರ್ಚೆ ನಡೆಸಲಾಯಿತು. ಕಳೆದ ಸಭೆಯಲ್ಲಿ ಆಯ್ದ ಫಲಾನುಭವಿಗಳಿಗೆ ಮನೆ ರಿಪೇರಿಗೆ ಸಹಾಯಧನ ನೀಡುವ ಕುರಿತು ಆಗಿದ್ದ ನಿರ್ಣಯ ಕಾರ್ಯರೂಪಕ್ಕೆ ಬರದಿದ್ದರ ಕುರಿತು ಸದಸ್ಯರು ವಾದವಿವಾದ ನಡೆಸಿದರು.
ಪಟ್ಟಣ ಪಂಚಯಾತ ಕಟ್ಟಡದ ಕಾಮಗಾರಿಗಳಿಗೆ ಹೆಚ್ಚುವರಿ ಹಣವನ್ನು ಅನುಮೋದಿಸಲು ಸದಸ್ಯರು ಒಪ್ಪಗೆ ನೀಡಲಿಲ್ಲ. ಈಗ ಬಾಕಿ ಉಳಿದಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಿದ ನಂತರವೇ ಮುಂದಿನ ಸಭೆಯಲ್ಲಿ ಈ ಕುರಿತು ನಿರ್ಣಯ ಕೈಗೊಳ್ಳುವಂತೆ ತಿಳಿಸಿದರು. ಅಂತೆಯೇ ೧೪ನೇ ಹಣಕಾಸು ಯೋಜನೆಯಡಿ ೨೦೧೭-೨೦ನೇ ಸಾಲಿನ ಉಳಿಯತಾಯ ಮೊತ್ತದ ಕ್ರಿಯಾ ಯೋಜನೆಯನ್ನು ಬದಲಿಸಿ, ಗಣಪತಿಗಲ್ಲಿಯ ಹಿಂದೂ ರುಧ್ರಭೂಮಿ ಹಾಗೂ ಪಟ್ಟಣದ ಮುಸ್ಲಿಂ ಸಮುದಾಯದ ಸ್ಮಶಾನಗಳ ಅಭಿವೃದ್ಧಿಗೆ ಸಮಾನ ಹಣವನ್ನು ಹಂಚುವAತೆ ತೀರ್ಮಾನಿಸಲಾಯಿತು.
ಸದಸ್ಯರು ಸಭೆಯಲ್ಲಿ ವಿಷಯಾಂತರ ಮಾಡಿ, ಅನಗತ್ಯ ಚರ್ಚೆ ಮಾಡುವುದನ್ನು ಗಮನಿಸಿದ ಮುಖ್ಯಾಧಿಕಾರಿಗಳು ಸಭೆಯ ಶಿಸ್ತನ್ನು ಕಾಯ್ದುಕೊಳ್ಳುವಂತೆ ಸದಸ್ಯರಿಗೆ ತಿಳಿಸಿದರು. ಸಭೆಯಲ್ಲಿ ಪ.ಪಂ. ಉಪಾಧ್ಯಕ್ಷೆ ಶ್ಯಾಮಿಲಿ ಪಾಟಣಕರ, ಸ್ಥಾಯಿ ಸಮಿತಿ ಅಧ್ಯಕ್ಷ ಅಮಿತ ಅಂಗಡಿ ಹಾಗೂ ಎಲ್ಲ ವಾರ್ಡ್ನ ಸದಸ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು
Leave a Comment