ಹೊನ್ನಾವರ : ತಾಲೂಕಾ ಪಂಚಾಯತ ಹೊನ್ನಾವರ ಯುವ ಸಬಲೀಕರಣ ಕ್ರೀಡಾ ಇಲಾಖೆ, ತಾಲೂಕು ಯುವ ಒಕ್ಕೂಟ ಹೊನ್ನಾವರ ಇವರ ಸಂಯುಕ್ತ ಆಶ್ರಯದಲ್ಲಿ ಸ್ವಾಮಿ ವಿವೇಕಾನಂದ ಜನ್ಮ ದಿನಾಚರಣೆ ಪ್ರಯುಕ್ತ ತಾಲೂಕಿನ ನೋಂದಾಯಿತ ಒಂದು ಕ್ರೀಯಾಶೀಲ ಸಂಘ ಹಾಗೂ ಯುವಕ ಸಂಘದ ಮೂಲಕ ಅತ್ಯಂತ ಕ್ರೀಯಾಶೀಲವಾಗಿ ಸಮಾಜಿಕ ಸೇವೆ, ಸಾಂಸ್ಕೃತಿ ಹಾಗೂ ಕ್ರೀಡೆಯಲ್ಲಿ ಸಾಧನೆ ಮಾಡಿದ ಯುವಕ ಯುವತಿಯರಿಗೆ ಸ್ವಾಮೀ ವಿವೇಕಾನಂದ ತಾಲೂಕ ಯುವ ವಯಕ್ತಿಕ ಪ್ರಶಸ್ತಿ ನೀಡಲಾಗುವುದು.
ಹೊನ್ನಾವರ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಸಂಘ ಸಂಸ್ಥೆಗಳಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ. ತಮ್ಮ ದಾಖಲೆಗಳನ್ನು ತಾಲೂಕ ಯುವ ಜನ ಸೇವಾ ಕ್ರೀಡಾಧಿಕಾರಿ ತಾಲೂಕ ಪಂಚಾಯತ ಹೊನ್ನಾವರ ಕಚೇರಿ ಸುಧೀಶ ನಯ್ಕ (9448530726) ಜ. 10ರ ಒಳಗೆ ತಲುಪಿಸಿ ಎಂದು ತಾಲೂಕ ಯುವ ಇಕ್ಕೂಟದ ಅಧ್ಯಕ್ಷ ವಿನಾಯಕ ಬಿ.ನಾಯ್ಕ ತಿಳಿಸಿದ್ದಾರೆ.
Leave a Comment