ಕೆಲವು ಅನಧಿಕೃತ ಆನ್ ಲೈನ್ ವೇದಿಕೆಗಳು ಕೇಂದ್ರೀಯ ಫ್ರೌಢಶಿಕ್ಷಣ ಮಂಡಳಿ (ಸಿಬಿಎಸ್‌ಸಿ) ಯ 10 ಮತ್ತು 12 ನೇ ತರಗತಿ ಪ್ರಮುಖ ಪರೀಕ್ಷೆ ಮಾದರಿ ಬದಲಾವಣೆ, ಎರಡನೇ ಅವಧಿ ಭೋರ್ಡ್ ಪರೀಕ್ಷೆಗಳ ಬಗ್ಗೆ ಸುಳ್ಳು ಮಾಹಿತಿ ಪ್ರಸಾರ ಮಾಡುತ್ತಿವೆ.
ಇದರಿಂದ ಸಾರ್ವಜನಿಕರು ಗೊಂದಲಕ್ಕೆ ಒಳಗಾಗದೆ ಎಚ್ಚರಿಕೆ ವಹಿಸಬೇಕು. ಮಂಡಳಿಯು ಪರೀಕ್ಷೆ ಅಥವಾ ತರಗತಿಗಳಿಗೆ ಸಂಬAಧಪಟ್ಟ ಏನೇ ವಿಷಯಗಳಿದ್ದರೂ ಅಧಿಕೃತ ವೆಬ್‌ಸೈಟ್‌ನಲ್ಲಿ ಮಾತ್ರ ಮಾಹಿತಿ ನೀಡುತ್ತದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕಳೆದ ವರ್ಷ ಜುಲೈನಲ್ಲಿ ಮಂಡಳಿಯ ಪರೀಕ್ಷಾ ಮಾದರಿಗಳನ್ನು ಬದಲಾಯಿಸಿದೆ. ಈಗಾಗಲೇ ಮೊದಲ ವರ್ಷದ ಪರೀಕ್ಷೆಗಳು ಪೂರ್ಣಗೊಂಡಿವೆ .
ಎರಡನೇ ಅವಧಿಯ ಪರೀಕ್ಷೆಗಳು ಕಳೆದ ವರ್ಷದ ಮಾದರಿಯಲ್ಲೇ ನಡೆಯುತ್ತವೆ. ಹಾಗಾಗಿ ಪೋಷಕರು ಅಧಿಕೃತ ವೆಬ್‌ಸೈಟ್‌ನ್ನೇ ವೀಕ್ಷಿಸುವಂತೆ ತಿಳಿಸಿದೆ.
Leave a Comment