
ಯಲ್ಲಾಪುರ: ಪಟ್ಟಣದ ಬಸ್ ನಿಲ್ದಾಣ ಬಳಿಯ ಅಂಬೇಡ್ಕರ್ ವೃತ್ತದಲ್ಲಿ ಶುಕ್ರವಾರ ಸಂಜೆ ತಾಲೂಕಾ ಬಿ.ಜೆ.ಪಿ ಯುವಮೋರ್ಚಾ ಸದಸ್ಯರು ಪ್ರಧಾನಿ ಭದ್ರತೆ ವಿಚಾರದಲ್ಲಿ ಲೋಪವೆಸಗಿದ ಪಂಜಾಬ್ ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು. ತಾಲೂಕು ಬಿ.ಜೆ.ಪಿ ಮಂಡಲಾಧ್ಯಕ್ಷ ಗೋಪಾಲಕೃಷ್ಣ ಎನ್ ಗಾಂವ್ ಕಾರ್ಯದರ್ಶಿ ಗಳಾದ ಡಾ. ರವಿ ಭಟ್ ಬರಗದ್ದೆ, ಬಿ.ಜೆ.ಪಿ ಹಿರಿಯ ಮುಖಂಡ ರಾಮು ನಾಯ್ಕ ರಾಜ್ಯ ವಿಕೇಂದ್ರೀಕರಣ ಯೋಜನ ಸಮಿತಿ ಉಪಾಧ್ಯಕ್ಷ ಪ್ರಮೋದ ಹೆಗಡೆ, ದೇಶದ ಪ್ರಧಾನಿಯೊಂದಿಗೆ ಪಂಜಾಬ್ ಕಾಂಗ್ರೆಸ್ ಪಕ್ಷ ನಡೆದುಕೊಂಡ ರೀತಿಯ ವಿರುದ್ಧ ಕಿಡಿಕಾರಿದರು. ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ ಅಧ್ಯಕ್ಷೆ ಸುನಂದದಾಸ್, ಉಪಾಧ್ಯಕ್ಷ ಶಾಮಿಲಿ ಪಾಟಣ ಕರ್ , ತಾ ಪಂ ಮಾಜಿ ಉಪಾಧ್ಯಕ್ಷೆ ಸುಜಾತ ಸಿದ್ದಿ,ಸದಸ್ಯರಾದ ಸೋಮೇಶ್ವರ್ ನಾಯ್ಕ, ಕಲ್ಪನಾ ನಾಯ್ಕ.ಉಮೇಶ್ ಭಾಗ್ವತ್, ಕೆ. ಟಿ ಹೆಗಡೆ,ಬಾಬಾ ಸಾಬ್ ಅಲನ್,ಪ್ರಸಾದ ಹೆಗಡೆ, ಯುವಮೋರ್ಚಾ ಅಧ್ಯಕ್ಷ ಪ್ರದೀಪ ಯಲ್ಲಾಪುರ ಕರ್, ,ಪಕ್ಷದ ಕಾರ್ಯಕರ್ತರು ಇದ್ದರು
Leave a Comment