
ಯಲ್ಲಾಪುರ :ವಾರಂತ್ಯ ಕರ್ಫ್ಯೂ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಜನಸಂಚಾರ ವಿರಳವಾಗಿ ಬಹುತೇಕ ಸ್ತಬ್ಧವಾಗಿದೆ. ಸದಾ ಜನ ಮತ್ತು ವಾಹನಗಳಿಂದ ಗಿಜಿ ಗುಡುತ್ತಿದ್ದ ಅಂಬೇಡ್ಕರ್ ಸರ್ಕಲ್, ಮಾರ್ಕೆಟ್ ರಸ್ತೆ, ಸೇರಿದಂತೆ ಪ್ರಮುಖ ರಸ್ತೆಗಳೆಲ್ಲ ಖಾಲಿ ಖಾಲಿ ಹೊಡೆಯುತ್ತಿದ್ದವು.

ರಸ್ತೆ ಸಾರಿಗೆ ಬಸ್ ಸಂಚಾರ ಇದ್ದರೂ ಪ್ರಯಾಣಿಕರಿಲ್ಲದೆ ಬಸ್ ,ಆಟೋ ನಿಲ್ದಾಣ ಖಾಲಿ ಯಾಗಿ ಬಿಕೋ ಎನ್ನುತ್ತಿತ್ತು . ಬಸ್ಸ್ ನಿಲ್ದಾಣದಲ್ಲಿ ಬಸ್ ಬೀಡು ಬಿಟ್ಟಿದ್ದು ಕನಿಷ್ಟಪಕ್ಷ 20 ಜನ ಪ್ರಯಾಣಿಕರಾದರೂ ಇದ್ದರೆ ಬಸ್ ಬಿಡುವದಾಗಿ ಬಸ್ ಕಂಟ್ರೋಲ್ದಾರ ಹೇಳಿ ಕಳಿಸುತ್ತಿದ್ದರು.
ಕರ್ಫ್ಯೂ ಮಧ್ಯೆ ಕೆಲಸವಿಲ್ಲದೆ ಓಡಾಡುತ್ತಿದ್ದ ಹಲವರು ಪೊಲೀಸರ ಕೈಗೆ ಸಿಕ್ಕಿಬಿದ್ದು ಕಾರಣ ನೀಡಲು ತಡ ವರಿಸುತ್ತಿದ್ದರು.ಸಿ ಪಿ ಐ ಸುರೇಶ ಎಳ್ಳೂರ ಮಾರ್ಗದರ್ಶನ ದಲ್ಲಿ ಪೋಲೀಸರು ಕಟ್ಟೆಚ್ಚರ ವಹಿಸುತ್ತಿದ್ದು
ಪ್ರಮುಖ ರಸ್ತೆಗಳಲ್ಲಿ ಬ್ಯಾರಿಕೇಡ್ ಗಳನ್ನು ಹಾಕಲಾಗಿತ್ತು. ಎಲ್ಲೆಡೆ ಪೊಲೀಸ್ ಕಣ್ಗಾವಲು ಇರಿಸಲಾಗಿತ್ತು .
2 ನೇ ಶನಿವಾರವಾಗಿದ್ದರಿಂದ ಸಹಜವಾಗಿ ಸರ್ಕಾರಿ ಕಚೇರಿ, ಬ್ಯಾಂಕ್ ಗೆ ರಜೆ ಇತ್ತು. ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿತ್ತು.

ತುರ್ತು ಸೇವೆಗಳಿಗೆ ಬೆರಳೆಣಿಕೆಯಷ್ಟು ಜನ ತಿರುಗಾಡುತ್ತಿದ್ದು ಪೊಲೀಸರಿಗೆ ಸೂಕ್ತ ಸಮಜಾಯಿಸಿ ನೀಡಬೇಕಾಗಿತ್ತು . ಹಣ್ಣು ತರಕಾರಿ ಇನ್ನಿತರ ಕೆಲ ಅಗತ್ಯ ವಸ್ತುಗಳ ಮಾರಾಟಕ್ಕೆ ಅನುಮತಿ ನೀಡಿದ್ದರೂ ಖರೀದಿಸುವವರ ಸಂಖ್ಯೆ ವಿರಳವಾಗಿತ್ತು .
ಗ್ರಾಮೀಣ ಭಾಗದವರು ಬಂದರೆ ಮಾತ್ರ ಪಟ್ಟಣದಲ್ಲಿ ವ್ಯಾಪಾರ ವಹಿವಾಟು. ಹಿಂದಿನ ಬಾರಿ ಲಾಕ ಡೌನ ಆದಾಗಿನ ನೋವು ಮರೆಯುವ ಮನ್ನವೆ ವೀಕ್ ಎಂಡ ಕರ್ಪ್ಯೂ ಹೆಸರಿನಲ್ಲಿ ಬಂದ ಮಾಡಿ ಗಾಯದಮೇಲೆ ಬರೆ ಎಳೆದಂತಾಗಿದೆ ಗ್ರಾಹಕರಿಲ್ಲ ಹಳ್ಳಿಯಿಂದ ರೈತರು ಬಂದರೆ ಬದುಕು ಒಂದು ದಿನದ ಅನ್ನಕ್ಕೆ ಪರೆದಾಡುವ ಪರಿಸ್ಥಿತಿ ಇದೆ. ಸಾಲ ನೀಡಿದವರು ಸುಮ್ಮನಿರುವದಿಲ್ಲ ಸಾಲ ಕಟ್ಟ ಬೇಕು,ಮಕ್ಕಳನ್ನು ಓದಿಸಬೇಕು ಸಂಸಾರ ನೆಡೆಯಬೇಕು ಹೇಗೆ ಜೀವನ ನೆಡೆಸುವದು ತಿಳಿಯುತ್ತಿಲ್ಲ ಬೆಂಗಳೂರಲ್ಲಿ ಕರೋನಾ ಹೆಚ್ಚಾದರೆ ಎಲ್ಲಾ ಕಡೆ ಬಂದು ಮಾಡುವದು ಸರಿಯಲ್ಲ . ಎಂದು ವ್ಯಾಪಾರಸ್ಥರು, ರಿಕ್ಷಾಡ್ರೈವರರು,ಕೂಲಿಕರಾರುಅವಲತ್ತುಕೊಳ್ಳುತ್ತಿದ್ದರು .ಒಟ್ಟಾರೆಯಾಗಿ ಪಟ್ಟಣವೆಲ್ಲ ಸ್ತಬ್ದವಾಗಿ ನೀರಸವಾಗಿತ್ತು.
Leave a Comment