ಯಲ್ಲಾಪುರ :ಸೋಮವಾರ ತಾಲೂಕಿನ 9 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ
ದೇಹಳ್ಳಿ 1,ವಜ್ರಳ್ಳಿ 1, ಯಲ್ಲಾಪುರ, ನಂದೋಳ್ಳಿ ವ್ಯಾಪ್ತಿಯ 7 ಜನ ಸೇರಿದಂತೆ 9 ಜನರಿಗೆ ಸೋಂಕು ದೃಢಪಟ್ಟಿದ್ದು,ಒಟ್ಟು 12 ಸಕ್ರಿಯ ಪ್ರಕರಣವಿದ್ದು, ಇಬ್ಬರು ಗುಣಮುಖರಾಗಿದ್ದಾರೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ನರೇಂದ್ರ ಪವಾರ ತಿಳಿಸಿದ್ದಾರೆ.
ಇಲ್ಲಿಯವರೆಗೂ ಒಟ್ಟು 4179 ಕೊವಿಡ್ ಪಾಸಿಟಿವ್ ಬಂದಿದೆ. 4127 ಜನ ಗುಣಮುಖರಾಗಿದ್ದಾರೆ. ಇದುವರೆಗೂ 40 ಜನ ಮೃತಪಟ್ಟಿದ್ದಾರೆ. ಇಂದು 576 ಜನರ ಗಂಟಲು ದ್ರವದ ಪರೀಕ್ಷೆ ಮಾಡಲಾಗಿದೆ. ಹಿಂದಿನ ಪರೀಕ್ಷೆಯೂ ಸೇರಿದಂತೆ 483 ಜನರ ಪರೀಕ್ಷೆ ಫಲಿತಾಂಶ ನೆಗೆಟಿವ್ ಬಂದಿದೆ. 1064 ಜನರ ಪರೀಕ್ಷಾ ಫಲಿತಾಂಶ ಬರುವುದು ಬಾಕಿಯಿದೆ, ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಮಾಹಿತಿ ನೀಡಿದ್ದಾರೆ.
Leave a Comment