
ಯಲ್ಲಾಪುರ : ಕಳೆದ ವರ್ಷ ಸುರಿದ ಅತೀವ ಮಳೆಯಿಂದಾಗಿ ತಾಲೂಕಿನ ಗುಳ್ಳಾಪುರ – ಹಳವಳ್ಳಿ ಸಂಪರ್ಕಿಸುವ ಸೇತುವೆ ಕೊಚ್ಚಿ ಹೋದ ಪರಿಣಾಮ ಈ ಭಾಗದ ಸಾರ್ವಜನಿಕರ ಸಂಪರ್ಕ ಕಡಿತಕೊಂಡಿತ್ತು.ಸ್ಥಳೀಯ ಬೇಡಿಕೆಗೆ ಶೀಘ್ರವಾಗಿ ಸ್ಪಂದಿಸಿದ ಸಚಿವರಾದ ಶಿವರಾಮ ಹೆಬ್ಬಾರ್ ಅವರು 20 ಲಕ್ಷ ರೂಪಾಯಿ ವಿಶೇಷ ಅನುದಾನವನ್ನು ಮಂಜೂರಿ ಮಾಡುವ ಮೂಲಕವಾಗಿ ತಾತ್ಕಾಲಿಕ ಸೇತುವೆ ನಿರ್ಮಾಣದ ಸಹಕರಿಸಿದರು.

ಸಚಿವರ ಸಹಕಾರದೊಂದಿಗೆ ಸ್ಥಳೀಯರು ಸೇರಿಕೊಂಡು ತಾತ್ಕಾಲಿಕ ಸೇತುವೆಯನ್ನು ನಿರ್ಮಾಣ ಮಾಡಿದ್ದು, ಇಂದು ಮಾನ್ಯ ಕಾರ್ಮಿಕ ಖಾತೆ ಸಚಿವ ಶಿವರಾಮ ಹೆಬ್ಬಾರ್ ಅವರು ತಾತ್ಕಾಲಿಕ ಸೇತುವೆಯ ಪರಿಶೀಲನೆ ನಡೆಸಿ, ಸ್ಥಗಿತಗೊಂಡ ಯಲ್ಲಾಪುರ – ಹಳವಳ್ಳಿ ಬಸ್ ಪುನರ್ ಆರಂಭಕ್ಕೆ ಚಾಲನೆ ನೀಡಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಸದಸ್ಯರು ಶ್ರೀಕಾಂತ ಶೆಟ್ಟಿ, ಪ್ರಮುಖರಾದ ಮುರಳಿ ಹೆಗಡೆ, ವಿಜಯ ಮಿರಾಶಿ ಹಾಗೂ ಗ್ರಾಮ ಪಂಚಾಯತ ಸದಸ್ಯರು, ಗುಳ್ಳಾಪುರ – ಹಳವಳ್ಳಿ ಭಾಗದ ಮುಖಂಡರು, ಗ್ರಾಮಸ್ಥರು, ಪಕ್ಷದ ವಿವಿಧಸ್ತರದ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.
Leave a Comment