ಹೊನ್ನಾವರ ;ಬಸ್ ನಿಂದ ಬಿದ್ದು ವಿದ್ಯಾರ್ಥಿನಿಯೋರ್ವಳು ಗಾಯಗೊಂಡಿರುವ ಘಟನೆ ತಾಲೂಕಿನ ಬಾಳೆಗದ್ದೆ ತಿರುವಿನಲ್ಲಿ ನಡೆದಿದೆ ಹಡಿನಬಾಳ ದೀಪಿಕಾ ಭಟ್ ಗಾಯ ಗೊಂಡ ಕೆ. ಬಾಳೆಗದ್ದೆ ರಸ್ತೆಯು ಅಪಾಯಕಾರಿ ತಿರುವಿನಿಂದ ಕೂಡಿದ್ದರೂ ಸಹಿತ ಚಾಲಕ ಬಸ್ಸನ್ನು ಅತಿವೇಗ ಅಜಾಗರೂಕತೆ ಮತ್ತು ನಿರ್ಲಕ್ಷತನದಿಂದ ಚಲಾಯಿಸಿದ್ದೇನೆ ಎನ್ನಲಾಗಿದೆ.
ಬಸ್ಸಿನ ನಿರ್ವಾಹಕ ಬಸ್ ಬಾಗಿಲನ್ನು ಸರಿಯಾಗಿ ಹಾಕದೆ ನಿರ್ಲಕ್ಷತನ ತೋರಿದ ಕಾರಣದಿಂದ ವಿದ್ಯಾರ್ಥಿನಿ ಬಿದ್ದು ತಲೆಗೆ ಗಾಯ ವಾಗಿದೆ ಎಂದು ದೂರಲಾಗಿದೆ. ಗಾಯಗೊಂಡ ವಿದ್ಯಾರ್ಥಿನಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಈ ಕುರಿತು ಚಾಲಕ ರಾಮಪ್ಪ ಬಿ.ಸಿ., ನಿರ್ವಾಹಕ ಅಬ್ದುಲ್ ಶುಕುರ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Leave a Comment