
ಯಲ್ಲಾಪುರ ತಾಲ್ಲೂಕಿನ ಕಿರವತ್ತಿ ವ್ಯಾಪ್ತಿಯ ಮದನೂರನಲ್ಲಿ ; ಆಕಸ್ಮಿಕವಾಗಿ ಬೆಂಕಿ ತಗುಲಿ ಕಬ್ಬಿನ ಬೆಳೆ ಬೆಂಕಿಗೆ ಆಹುತಿಯಾಗಿದೆ.ಮದನೂರಿನ ಮಂಜುನಾಥ ಶಿರನಾಳಕರ ಎಂಬುವರಿಗೆ ಸೇರಿದ ಕಬ್ಬಿನಗದ್ದೆಯಲ್ಲಿ ಶಿಥಿಲಗೊಂಡ ವಿದ್ಯುತ ಕಂಬದ ತಂತಿ ಜೋತುಬಿದ್ದು ಉಂಟಾದ ಶಾರ್ಟ್ ಸರ್ಕೀಟ್ ನಿಂದ ಬೆಂಕಿ ತಗುಲಿರಬಹುದೆಂದು ಅಂದಾಜಿಸಲಾಗಿದೆ.

ಸುಮಾರು 15 ಎಕರೆ ಕಬ್ಬಿನ ಗದ್ದೆಯಲ್ಲಿ ಎರಡು ಮೂರು ಎಕರೆಯಲ್ಲಿ ಬೆಳೆದಿದ್ದ ಕಬ್ಬಿನ ಬೆಳೆ ಬೆಂಕಿಗೆ ಆಹುತಿಯಾಗಿ ಅಪಾರ ಪ್ರಮಾಣದಲ್ಲಿ ನಷ್ಟ ವುಂಟಾಗಿದೆ.

ಅಗ್ನಿ ಶಾಮಕದಳ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ಬೆಂಕಿ ಆರಿಸಿ ಉಳಿದ ಕಬ್ಬಿಗೆ ಬೆಂಕಿಯ ಕೆನ್ನಾಲಿಗೆ ಚಾಚದಂತೆ ತಡೆಗಟ್ಟಿದ್ದಾರೆ. ಅಗ್ನಿಶಾಮಕದಳದ ಠಾಣಾಧಿಕಾರಿ ಶಂಕರಪ್ಪ ಅಂಗಡಿ, ಫೈರ್ ಮನ್ ಗಳಾದ ಅಮಿತ ಗುನಗಿ, ನಾಗೇಶ ದೇವಡಿಗ, ಚಾಲಕ ರವಿ ಹವಾಲ್ದಾರ್, ಮುಂತಾದವರು ಬೆಂಕಿ . ಆರಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದರು.
Leave a Comment