ಯಲ್ಲಾಪುರ : ಆಟದಲ್ಲಿ ಸೋಲು ಗೆಲುವು ಮುಖ್ಯವಾಗದೇ ಕ್ರೀಡಾ ಮನೋಭಾವನೆ ಇರಬೇಕು. ಕ್ರೀಡೆಯ ಮೂಲಕ ಯುವಕರನ್ನು ಒಗ್ಗೂಡಿಸಿದಲ್ಲಿ ಉತ್ತಮ ದೇಶ ನಿರ್ಮಾಣ ಸಾಧ್ಯ. ಈದಿಶೆಯಲ್ಲಿ ಯುವಕರಿಗೆ ಮನೋಸ್ಥೆöÊರ್ಯ ಹೆಚ್ಚಿಸುವ, ಕ್ರೀಡಾಸ್ಪೂರ್ತಿವಾಗುವಂತೆ ಯುವಮೋರ್ಚಾದಿಂದ ಕಮಲಟ್ರೋಪಿ ಟೂರ್ನಾಮೆಂಟ್ ಅಯೋಜಿಸಿದ್ದು ಶ್ಲಾಘನೀಯಕಾರ್ಯ ಎಂದು.ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ವಿ.ಎಸ್. ಪಾಟೀಲ್ ಹೇಳಿದರು.
ಅವರು ಪಟ್ಟಣದ ಕಾಳಮ್ಮನಗರದ ತಾಲ್ಲೂಕು ಕ್ರೀಡಾಂಗಣದಲ್ಲಿ ಕಿರವತ್ತಿಯ ಗ್ರಾಮದೇವಿ ಸ್ಪೋಟ್ಸ್ ಕ್ಲಬ್ ಹಾಗೂ ಬಿಜೆಪಿ ಯುವ ಮೋರ್ಚಾ ತಾಲ್ಲೂಕು ಘಟಕ ಸಂಯುಕ್ತಾಶ್ರಯದಲ್ಲಿ ಆಜಾದಿಕಾ ಅಮೃತಹೋತ್ಸವ ಅಂಗವಾಗಿ ಆಯೋಜಿಸಿದ್ದ ‘ ಕಮಲ್ ಟ್ರೋಪಿ ಲೆದರ್ ಬಾಲ್ ಕ್ರಿಕೇಟ್ ಟೂರ್ನಾಮೆಂಟ್ ನ ಅಂತಿಮ ಪಂದ್ಯದ ಬಹುಮಾನ ವಿತರಣಾ ಸಮಾರಂಭದಲ್ಲಿ ಮಾತನಾಡಿದರು
ಬಿಜೆಪಿ ಜಿಲ್ಲಾ ಮಾಧ್ಯಮ ಪ್ರಮುಖ ನಾಗರಾಜ ನಾಯಕ .ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಪ್ರಶಾಂತ ನಾಯಕ ಮತನಾಡಿದರು. ಜಿಲ್ಲಾ ಘಟಕದ ಅಧ್ಯಕ್ಷ ವೆಂಕಟೇಶ್ ನಾಯ್ಕ ಅಧ್ಯಕ್ಷತೆ ವಹಿಸಿದ್ದರು.
ಅಂತಿಮ ಪಂದ್ಯದಲ್ಲಿ ಯಲ್ಲಾಪುರ ಪಟ್ಟಣದ ಆಜಾದಕ್ರಿಕೆಟ್ ಕ್ಲಬ್ ತಂಡ ಚಾಂಪಿಯನ್ ಆಗುವ ಮೂಲಕ ೩೦ಸಾವಿರ ರೂ.ನಗದುಹಾಗೂ ಆಕರ್ಷಕಟ್ರೋಪಿ ಹಾಗೂ ಕಿರವತ್ತಿ ಗ್ರಾಮದೇವಿ ಸ್ಪೋರ್ಟ್ಸ ತಂಡ ರನ್ನರ್ಸ್ ಆಪ್ ಆಗಿ೨೦ ಸಾವಿರ ನಗದು ಹಾಗೂ ಆಕರ್ಷಕ ಟ್ರೋಪಿ ಪಡೆದುಕೊಂಡು ವಿಜಯಿಗಳಾದರು. ೨೬ತಂಡಗಳು ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದವು. ಸಚಿನ ಕುಂದೂರ, ಅಂತೋನ್ ನಿರ್ಣಾಯಕರಾಗಿ ಕಾರ್ಯನಿರ್ವಹಿಸಿದರು.
ಇದೇ ಸಂದರ್ಭದಲ್ಲಿ ಪಟ್ಟಣದಲ್ಲಿ ಯ ಮಾಜಿ ಆಟಗಾರರು, ಕ್ರೀಡಾ ಪ್ರೋತ್ಸಾಹಕರಾದ ರವಿ ಶಾನಭಾಗ, ಇಬ್ರಾಹಿಂ, ಮಹಮ್ಮದ ಗೌಸ್, ವಿಕಾಸ ನಾಯ್ಕ, ಬಸವರಾಜ ನಂದೊಳ್ಳಿಮಠ,ಮಹಮ್ಮದ ಅಲಿ, ಮಾರುತಿ ನಾಯ್ಕ ಇವರನ್ನು ಸಂಘಟಕರ ಪರವಾಗಿ ಸನ್ಮಾನಿಸಲಾಯಿತು.
, ತಾ.ಪಂ ಮಾಜಿ ಅಧ್ಯಕ್ಷೆ ಚಂದ್ರಕಲಾ ಭಟ್ಟ, ಬಿಜೆಪಿ ತಾಲೂಕಾ ಪ್ರಧಾನ ಕಾರ್ಯದರ್ಶಿ ಡಾ. ರವಿ ಭಟ್ಟ ಬರಗದ್ದೆ, ಜಿಪಂ ಮಾಜಿ ಸದಸ್ಯೆ ಶೃತಿ ಹೆಗಡೆ, ಪ.ಪಂ ಸದಸ್ಯ ಸೋಮೇಶ್ವರ ನಾಯ್ಕ, ಗೋವಿಂದ ನಾಯ್ಕ, ಜಿಪಂ ಮಾಜಿ ಸದಸ್ಯ ರಾಘು ಭಟ್ಟ, ರಘುಪತಿ ಭಟ್ಟ, ಜಿ.ಎಂ.ತಾAಡೂರಾಯನ್ ವೇದಿಕೆಯಲ್ಲಿದ್ದರು.
ತಾಲ್ಲೂಕು ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಪ್ರದೀಪ ಯಲ್ಲಾಪುರಕರ ಸ್ವಾಗತಿಸಿದರು, ಬಿಜೆಪಿ ಮಂಡಳ ಪ್ರಧಾನ ಕಾರ್ಯದರ್ಶಿ ಪ್ರಸಾದ ಹೆಗಡೆ, ತಾಲೂಕಾ ಮಾಧ್ಯಮ ಪ್ರಮುಖ ಸುನೀಲ ಕಾಂಬಳೆ ನಿರೂಪಿಸಿದರು, ಬಿಜೆಪಿ ಮಂಡಳ ಅಧ್ಯಕ್ಷ ಗೋಪಾಲ ಕೃಷ್ಣ ಗಾವಂಕರ ವಂದಿಸಿದರು.
Leave a Comment