ಬೆಂಗಳೂರು : ನಮ್ಮ ಪ್ರೀತಿಯ ಬೆಕ್ಕು ಕಳುವಾಗಿದೆ, ಹುಡುಕಿಕ್ಕೊಟ್ಟವರಿಗೆ 35 ಸಾವಿರ ರೂ. ಬಹುಮಾನ ನೀಡುವುದಾಗಿ ವ್ಯಕ್ತಿಯೊಬ್ಬರು ಘೋಷಿಸಿ ಬೆಕ್ಕಿನ ಚಿತ್ರವನ್ನು ಎಲ್ಲೆಡೆ ಫ್ಲೆಕ್ಸ್ ಹಾಕಿದ್ದಾರೆ. ಮನೆಯಲ್ಲಿನ ಚಿನ್ನಾಭರಣ, ವಸ್ತು ಇನ್ನಿತರ ಸಾಮಾಗ್ರಿಗಳು ಕಳುವಾದ ಬಗ್ಗೆ ದೂರು ನೀಡುವುದು ಸಾಮಾನ್ಯ ಆದರೆ ಬೆಂಗಳೂರಿನ ಮಿಸ್ಟಾ ಶರೀಫ್ ಎಂಬುವವರು ತಾವು ಸಾಕಿದ ಬೆಕ್ಕು ಕಳುವಾಗಿದೆ ಎಂದು ತಿಲಕ್‌ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಜಯನಗರ ರಾಜಣ್ಣ ಲೇಔಟ್ ನಿವಾಸಿ ಮಿಸ್ಟಾ ಶರೀಫ್, ನಮ್ಮ ಮನೆಗೆ ಉಡೆಗೊರೆಯಾಗಿ ಬಂದ ಬೆಕ್ಕನ್ನು ಮನೆಯ ಮಗುವಂತೆ ಸಾಕಿದ್ದೆವು. ಈಗ್ಗೆ ಮೂರು ದಿನಗಳಿಂದ ಬೆಕ್ಕು ಕಾಣೆಯಾಗಿದೆ. ದಯವಿಟ್ಟು ಇದನ್ನು ಹುಡಕಿ ಕೊಡಿ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ವಿನಂತಿಸಿದ್ದಾರೆ.
ಮನೆಯಲ್ಲಿ ಬೆಕ್ಕು ಮತ್ತು ಮೊಲ ಎರಡು ಇದ್ದವು. ಪ್ರತಿದಿನ ಎರಡೂ ಆಟವಾಡುತ್ತಿದ್ದವು. ಈಗ ಮೊಲ ಒಂಟಿಯಾಗಿದೆ. ಅದಕ್ಕಿಂತ ಹೆಚ್ಚಾಗಿ ಬೆಕ್ಕನ್ನು ನಾವು ಮನೆಯ ಸದಸ್ಯ ಎಂದೇ ಭಾವಿಸಿದ್ದೆವು. ಹೆಚ್ಚು ಮನೆ ಮಗನಂತೆ ಇತ್ತು ಅದು ಮನೆಬಿಟ್ಟು ಎಲ್ಲಿಯೂ ಹೋಗುತ್ತಿರಲಿಲ್ಲ. ಅದ್ಯಾರು ಕದ್ದು ಒಯ್ದರೋ ಗೊತ್ತಿಲ್ಲ. ಎನೇ ಆಗಲಿ ಹುಡಕಿಕೊಟ್ಟವರಿಗೆ 35 ಸಾವಿರ ರೂ ಬಹುಮಾನ ನೀಡುವುದಾಗಿ ಶರೀಫ್ ಹೇಳಿದ್ದಾರೆ.
Leave a Comment