ಹೊನ್ನಾವರ : ಪಟ್ಟಣದ ತೇಲಂಗ ಝೆರಾಕ್ಸ್ ನ ಮಾಲಕ ವಿಠ್ಠಲದಾಸ ತೇಲಂಗ ಹಾಗೂ ಹರೀಶ ಗಾಯತೊಂಡೆ ವಿರುದ್ಧ ಪೊಲೀಸ್ ಠಾಣೆಯಲ್ಲಿ ಜಾತಿ ನಿಂದನೆ ದೂರು ದಾಖಲಾಗಿದೆ.
ಪಟ್ಟಣದ ರಾಯಲಕೇರಿಯ ತುಳಸಿದಾಸ ಪಾವಸ್ಕರ ಹಾಗೂ ಅವರ ಪತ್ನಿ ಪ್ರಿಯಾ ಪಾವಸ್ಕರ ದೂರು ನೀಡಿದವರಾಗಿದ್ದಾರೆ. ತೇಲಂಗ ಕಾಂಪ್ಲೆಕ್ಸ್ ನಲ್ಲಿ ಕಳೆದ 21 ವರ್ಷಗಳಿಂದ ಚಪ್ಪಲಿ ಅಂಗಡಿ ನಡೆಸುತ್ತಿರುವ ತುಳಸಿದಾಸ ಪಾವಸ್ಕರ್, ಜ.21 ರಂದು ಅಂಗಡಿಯಲ್ಲಿರುವಾಗ ಆರೋಪಿಗಳು ಕಾರಿನಲ್ಲಿ ಬಂದು ತಮ್ಮ ಅಂಗಡಿAಗೆ ಅಕ್ರಮ ಪ್ರವೇಶ ಮಾಡಿ ಜಾತಿ ಹೆಸರು ಹೇಳಿ ಬೈಯ್ದು ಕೊಲೆ ಬೆದರಿಕೆ ಹಾಕಿ ಅಂಗಡಿಯಿAದ ಹೊರಗೆ ಹಾಕುವುದಾಗಿ ಧಮಕಿ ಹಾಕಿದ್ದಾರೆ.
ಪ್ರಿಯಾ ಪಾವಸ್ಕರ ಇವರಿಗೆ ನಡತೆಯ ಬಗ್ಗೆ ಅವಹೇಳನಕಾರಿಯಾಗಿ ನಿಂದಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ಸಂಬAಧ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Leave a Comment