ನವದೆಹಲಿ : ವಿಶ್ವ ಆರೋಗ್ಯ ಸಂಸ್ಥೆಯ – ಕೋವಿಡ್ ಡ್ಯಾಶ್ ಬೋರ್ಡ್ ನಕ್ಷೆಯಲ್ಲಿ ಜಮ್ಮು – ಕಾಶ್ಮೀರವನ್ನು ಪಕಿಸ್ತಾನ ಮತ್ತು ಚೀನಾ ಭಾಗವೆಂದು ಬಿಂಬಿಸಲಾಗಿದೆ.
ಇದನ್ನು ಗಂಭೀರವಾಗಿ ತೆಗೆದುಕೊಳ್ಳುವಂತೆ ಆಗ್ರಹಿಸಿ ಟಿಎಂಸಿ ಸಂಸದ ಎಂ.ಪಿ ಸಂತನು ಸೇನ್ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಸಂತನು, ಡಬ್ಲ್ಯೂ ಎಚ್ ಒ ಕೋವಿಡ್ ವೆಬ್ ಸೈಟಿನಲ್ಲಿ ಜಮ್ಮು – ಕಾಶ್ಮೀರವನ್ನು ಪ್ರತ್ಯೇಕ ಬಣ್ಣದಲ್ಲಿ ಗರುತಿಸಲಾಗಿದೆ.
ಅದರ ಮೇಲೆ ಕ್ಲಕ್ಕಿಸಿದರೆ ಪಾಕಿಸ್ತಾನ ಮತ್ತು ಚೀನಾದ ಕೋವಿಡ್ ಅಂಕಿಅAಶ ದೊರೆಯುತ್ತದೆ. ಅರುಣಾಚಲ ಪ್ರದೇಶದ ಕೆಲವು ಭಾಗವನ್ನೂ ವಿಭಿನ್ನವಾಗಿ ಗುರುತಿಸಲಾಗಿದೆ, ಎಂದು ತಿಳಿಸಿದ್ದಾರೆ.
Leave a Comment