ಭಟ್ಕಳ : ಅನಾರೋಗ್ಯದಿಂದ ಬಳಲುತ್ತಿದ್ದ ಮಹಿಳೆಯೋರ್ವರು ತನ್ನ ತಾಯಿಯ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮುರ್ಡೆಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ತೆರ್ನಮಕ್ಕಿಯ ಜನತಾ ಕೊಲೋನಿಯಲ್ಲಿ ನಡೆದಿದೆ.
ಅಂಕೋಲಾ ತಾಲೂಕಿನ ಅಚವೆ ಕೇಶವಳ್ಳಿಯ ಲಕ್ಷಿö್ಮÃ ಕೋ ಮಂಜುನಾಥ ಹಲ್ಳೇರ (32) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಕಾಯ್ಕಿಣಿ ಗ್ರಾಮದ ತೆರ್ನಮಕ್ಕಿಯ ಜನತಾ ಕಲೋನಿಯ ಈಕೆಯನ್ನು 2019 ರಲ್ಲಿ ಅಂಕೋಲಾಕ್ಕೆ ಮದುವೆ ಮಾಡಿ ಕೊಡಲಾಗಿದ್ದು ನಂತರ ಈಕೆಗೆ ಆರೋಗ್ಯದಲ್ಲಿ ಏರುಪೇರಾಗಿದ್ದು ಅನೇಕ ಕಡೆಗಳಲ್ಲಿ ವೈದ್ಯಕೀಯ ಉಪಚಾರ ಮಾಡಿದ್ದರೂ ಕೂಡ ಕಾಯಿಲೆ ವಾಸಿಯಾಗದ ಕಾರಣ ಅದನ್ನೇ ಮನಸ್ಸಿಗೆ ಹಚ್ಚಿಕೊಂಡಿದ್ದಳು ಎನ್ನಲಾಗಿದೆ.
ತನ್ನ ತಾಯಿಯ ಮನೆಯಲ್ಲಿಯೇ ನೇಣು ಬಿಗಿದು ಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಈ ಕುರಿತು ಮುರ್ಡೆಶ್ವರ ಠಾಣೆಯಲ್ಲಿ ಮೃತಳ ಸಹೋದರ ನಾಗರಾಜ ಮಾಸ್ತಿ ಹಳ್ಳೇರ ಇವರು ನೀಡಿದ ದೂರಿನಂತೆ ಎ.ಎಸ್.ಐ. ಸುಬ್ಬಾ ಜೆ. ದೇವಾಡಿಗ ಪ್ರಕರಣ ದಾಖಲಿಸಕೊಂಡು ತನೀಕೆ ನಡೆಸಿದ್ದಾರೆ.
Leave a Comment